ರೆಸಾರ್ಟ್‍ನಲ್ಲಿ ಪತ್ತೆಯಾಯ್ತು ಕಿಮ್ ಜಾಂಗ್ ಉನ್ ಬಳಸುತ್ತಿದ್ದ ಸ್ಪೆಷಲ್ ರೈಲು..!

ಈ ಸುದ್ದಿಯನ್ನು ಶೇರ್ ಮಾಡಿ

ಸಿಯೋಲ್, ಏ.26-ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅನಾರೋಗ್ಯ ಮತ್ತು ನಿಗೂಢ ಕಣ್ಮರೆ ಪ್ರಕರಣ ಭಾರೀ ಸುದ್ದಿಯಾಗಿರುವಾಗಲೇ ಅವರ ವಿಶೇಷ ರೈಲು ರೆಸಾರ್ಟ್ ಬಳಿ ಪತ್ತೆಯಾಗಿದೆ. ಇದು ಮತ್ತಷ್ಟು ಊಹಾಪೋಹಕ್ಕೆ ಎಡೆ ಮಾಡಿಕೊಟ್ಟಿದೆ.

ಏಷ್ಯಾದ ಹಿಟ್ಲರ್ ಎಂದೇ ಕುಖ್ಯಾತಿ ಪಡೆದಿರುವ 36 ವರ್ಷದ ಕಿಮ್ ಬದುಕಿದ್ದಾರೆಯೇ ಅಥವಾ ಸತ್ತಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತಿರುವ ಸಂದರ್ಭದಲ್ಲದೆ ಉತ್ತರ ಕೊರಿಯಾದ ಪೂರ್ವ ಕರಾವಳಿ ಪ್ರದೇಶದ ರೆಸಾರ್ಟ್‍ನ ಆವರಣದಲ್ಲಿ ಕಳದೊಂದು ವಾರದಿಂದ ಕಿಮ್ ಅವರ ಸ್ಪೆಷಲ್ ಟ್ರೈನ್ ನಿಂತಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ.

ಕಿಮ್ ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸುತ್ತಿದ್ದ ರೈಲು ರೆಸಾರ್ಟ್‍ಗೆ ಹೋಗಲು ಕಾರಣವೇನು ? ಅಲ್ಲಿಂದ ಕಿಮ್ ಏನಾದರು ? ಎಲ್ಲಿಗೆ ಹೋದರು? ಅವರ ಸ್ಥಿತಿ ಏನಾಯಿತು? ಎಂಬಿತ್ಯಾದಿ ಹೊಸ ಪ್ರಶ್ನೆಗಳು ಈಗ ಹುಟ್ಟಿಕೊಂಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕೆಲವು ದಿನಗಳಿಂದ ಕಿಮ್ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಈ ನಡುವೆ ಯಾವುದೇ ಗಂಭೀರ ರೋಗದಿಂದ ಅವರು ಶಸ್ತ್ರಕ್ರಿಯೆಗೆ ಒಳಗಾದರು. ಸರ್ಜರಿ ನಂತರ ಅವರ ಆರೋಗ್ಯ ಸ್ಥಿತಿ ವಿಷಮವಾಗಿದೆ ಎಂದು ಮೂಲಗಳು ಹೇಳಿದ್ದಾರೆ. ಮತ್ತೊಂದು ಅನಧಿಕೃತ ಮೂಲಗಳ ಪ್ರಕಾಣ ಕಿಮ್ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ಇವೆಲ್ಲದರ ನಡುವೆ ಅವರ ವಿಶೇಷ ರೈಲು ಪತ್ತೆಯಾಗಿರುವುದು ಹೊಸ ಈ ಪ್ರಕರಣ ಮತ್ತಷ್ಟು ಗೊಂದಲದ ಗೋಜಿಗೆ ಕಾರಣವಾಗಿದೆ. ಉತ್ತರ ಕೊರಿಯಾ ವಿದ್ಯಮಾನಗಳನ್ನು ಹೊರ ಜಗತ್ತಿಗೆ ತಿಳಿಸುತ್ತಿರುವ 38 ನಾರ್ತ್ ಎಂಬ ವೈಬ್‍ಸೈಟ್ ಸ್ಯಾಟ್‍ಲೈಟ್ ಇಮೇಜ್‍ಗಳನ್ನು ಬಿಡುಗಡೆ ಮಾಡಿದೆ. ಅರೆ ಈ ಸುದ್ದಿ ಜಾಲದಲ್ಲಿ ಕಿಮ್ ಆರೋಗ್ಯದ ಬಗ್ಗೆಯಾಗಲಿ ಅಥವಾ ಅವರ ನಾಪತ್ತೆ ಕುರಿತಾಗಲೇ ಯಾವುದೇ ಮಾಹಿತಿ ನೀಡಿಲ್ಲ.

ಇನ್ನೊಂದು ಮೂಲಗಳ ಪ್ರಕಾರ ಸರ್ವಾಧಿಕಾರಿ ಕಿಮ್ ಉತ್ತರ ಕೊರಿಯಾ ರಾಜಧಾನಿ ಪಯೊಂಗ್‍ಯಾಂಗ್‍ನಿಂದ ರೈಲಿನಲ್ಲಿ ಪೂರ್ವ ಕರಾವಳಿ ಭಾಗದತ್ತ ಪ್ರಯಾಣ ಮಾಡಿರುವುದು ಖಚಿತ. ಆದರೆ ಅಲ್ಲಿಂದ ಅವರು ಎಲ್ಲಿ ಹೋದರು..? ಏನಾದರು..? ಎಂಬ ಪ್ರಶ್ನೆಗಳು ಸಹ ನಿಗೂಡವಾಗಿವೆ.

ಏತನ್ಮಧ್ಯೆ ಉತ್ತರ ಕೊರಿಯಾ ಕಡು ವೈರಿ ದೇಶ ದಕ್ಷಿಣ ಕೊರಿಯಾ ಬೇಹುಗಾರರು ಕಿಮ್ ವಾಸ್ತವ ಸ್ಥಿತಿ ಬಗ್ಗೆ ತಿಳಿಸಲು ಗೂಢಾಚಾರಿಕೆ ಕಾರ್ಯವನ್ನು ಬಿರಿಸುಗೊಳಿಸಿದ್ದಾರೆ.

Facebook Comments

Sri Raghav

Admin