ಸ್ವೀಡನ್ ರಾಜ,ರಾಣಿ ಭಾರತ ಪ್ರವಾಸ : ಮಹತ್ವದ ಒಪ್ಪಂದಗಳಿಗೆ ಸಹಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.2-ಸ್ವೀಡನ್ ರಾಜ 26ನೇ ಕಾರ್ಲ್ ಗುಸ್ತಾಫ್ ಮತ್ತು ರಾಣಿ ಸಿಲ್ವಿಯಾ ಇಂದಿನಿಂದ ಐದು ದಿನಗಳ ಭಾರತ ಪ್ರವಾಸ ಆರಂಭಿಸಿದ್ದಾರೆ. ದೆಹಲಿಗೆ ಇಂದು ಬೆಳಗ್ಗೆ ಆಗಮಿಸಿದ ರಾಜ-ರಾಣಿಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ನಂತರ ಈ ರಾಜದಂಪತಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡರು.

ದೊರೆ ಗುಸ್ತಾಫ್ ನೇತೃತ್ವದ ಉನ್ನತ ಮಟ್ಟದ ವಾಣಿಜ್ಯ ನಿಯೋಗ ಭಾರತದೊಂದಿಗೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದೆ. ಸ್ವೀಡನ್ ರಾಯಲ್ ಕಪಲ್ ದೆಹಲಿಯಲ್ಲಿ ಜಮಾ ಮಸೀದಿ, ಕೆಂಪು ಕೋಟೆ ಮತ್ತು ಇಂದಿರಾಸ್ಮೃತಿ ಸ್ಥಳಗಳಿಗೆ ಬೇಟಿ ನೀಡುವರು ನಂತರ ಮುಂಬೈ ಮತ್ತು ಉತ್ತರಾಖಂಡ ರಾಜ್ಯಗಳಿಗೂ ತೆರಳಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವರು.

Facebook Comments