ಸೆ.9 ರಿಂದ ಕರ್ನಾಟಕದ ಮೊದಲ ಕಿಸಾನ್ ರೈಲು ಸಂಚಾರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.16- ಕರ್ನಾಟಕದ ಮೊದಲ ಕಿಸಾನ್ ರೈಲು ಇದೇ ಸೆಪ್ಟೆಂಬರ್ 19 ರಿಂದ ಸಂಚಾರ ಆರಂಭಿಸಲಿದೆ. 2020-21 ರ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಮಂಡಿಸಿದಂತೆ, ಹಾಲು, ಮಾಂಸ, ಮೀನು ಅಲ್ಲದೆ ಇತರ ಬೇಗನೆ ಕೆಡಬಲ್ಲ ಪದಾರ್ಥಗಳ ನಿರಂತರ ಪೂರೈಕೆಯ ಸರಪಳಿಯನ್ನು ನಿರ್ಮಿಸುವ ಘೋಷಣೆ ಮಾಡಲಾಗಿತ್ತು. ಅದರಂತೆ ಭಾರತೀಯ ರೈಲ್ವೆಯು ಸಾರ್ವಜನಿಕ ಮತ್ತು ಖಾಸಗಿ ಸಹಯೋಗ ದೊಂದಿಗೆ ಕಿಸಾನ್ ರೈಲು ಆರಂಭಿಸಿದೆ.

ಕಿಸಾನ್ ರೈಲುಗಳು ಬಹು ವಿಧದ ಸರಕುಗಳು, ಬಹು ವಿಧದ ಸಾಗಣೆದಾರರು ಮತ್ತು ಬಹು ವಿಧದ ಗ್ರಾಹಕರಿಂದ ಕೂಡಿದ ರೈಲುಗಳಾಗಿವೆ. ಈ ರೈಲು ಆರಂಭವಾಗುವ ಸ್ಥಳದಿಂದ ಕೊನೆಯ ನಿಲ್ದಾಣದ ನಡುವೆ ಅನೇಕ ನಿಲುಗಡೆಗಳಿದ್ದು, ಈ ಎಲ್ಲ ನಿಲುಗಡೆಗಳಲ್ಲಿ ಸರಕುಗಳನ್ನು ಲೋಡ್ ಮತ್ತು ಅನ್‍ಲೋಡ್ ಮಾಡಲು ಅವಕಾಶವಿದೆ.

ಇನ್ನು ಕರ್ನಾಟಕದ ಮೊದಲ ಕಿಸಾನ್ ರೈಲು ಬೆಂಗಳೂರಿನ ಕಾಂತ್ರಿವೀರ ಸಂಗೊಳ್ಳಿರಾಯಣ್ಣ ರೈಲ್ವೇ ನಿಲ್ದಾಣದಿಂದ ನಿಜಾಮುದ್ದೀನ್ ತಲುಪಲಿದೆ.. ರೈಲು ಗಾಡಿ ಸಂಖ್ಯೆ 0625/0626 , ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 17 ರವರಗೆ ಪ್ರತಿ ಶನಿವಾರ ಸಂಜೆ 4:45ಕ್ಕೆ ಗಂಟೆಗೆ ಹೊರಟು ಸೋಮವಾರ ರಾತ್ರಿ 11:45 ಗಂಟೆಗೆ ನಿಜಾಮುದ್ದೀನ್ ತಲುಪುತ್ತದೆ.

ಪುನಃ, ನಿಜಾಮುದ್ದೀನ್- ಕೆ ಎಸ್ ಆರ್ ವಿಶೇಷ ರೈಲು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 20 ರವರೆಗೆ ಪ್ರತಿ ಮಂಗಳವಾರ ಸಂಜೆ 5:45ಕ್ಕೆ ಹೊರಟು ಶುಕ್ರವಾರ ರಾತ್ರಿ 1:45 ಗಂಟೆಗೆ ಬೆಂಗಳೂರು ತಲುಪುತ್ತದೆ.

ಈ ರೈಲುಗಳು 10 ವಿಪಿಹೆಚ್( ಅಧಿಕ ಸಾಮಥ್ರ್ಯದ ಪಾರ್ಸಲ್ ವ್ಯಾನ್) ಮತ್ತು 2 ಬ್ರೇಕ್ ಲಗೇಜ್ ಕಂ ಜನರೇಟರ್ ಕಾರ್‍ಗಳಿಂದ ಸಂಯೋಜಿತವಾಗಿದ್ದು, ಮೈಸೂರು, ಹಾಸನ, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಲೋಂಡ,ಬೆಳಗಾವಿ, ಮೀರಜ್, ಪುಣೆ,ಮನ್ಕಾಡ್ , ಭೂಸಾವಲ್, ಇಟಾರ್ಸಿ, ಭೂಪಾಲ್, ಝೂನ್ಸಿ, ಆಗ್ರಾ ದಂಡು ಮತ್ತು ಮಥುರಗಳಲ್ಲಿ ನಿಲುಗಡೆ ಹೊಂದಿದೆ. ಇನ್ನು ರೈಲಿನಲ್ಲಿ ಪ್ರಯಾಣಿಕರ ಸಂಚಾರಕ್ಕೆ ಅವಕಾಶವಿಲ್ಲ. ರೈತರು ತಮ್ಮ ಸರಕುಗಳಿಗೆ ಸೂಕ್ತ ಬೆಲೆ ಪಡೆಯಲು ಕಿಸಾನ್ ರೈಲು ಸೇವೆಯು ಅನುಕೂಲವಾಗಲಿದೆ.

Facebook Comments