ಬಾಲಿವುಡ್‍ನ ಖ್ಯಾತ ಗಾಯಕ ಕಿಶೋರ್ ಕುಮಾರ್ ಪತ್ನಿ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತ್ತಾ, ಜೂ.3- ಬಾಲಿವುಡ್‍ನ ಖ್ಯಾತ ಗಾಯಕ, ನಟ ಕಿಶೋರ್‍ಕುಮಾರ್‍ರ ಮೊದಲ ಪತ್ನಿ , ಬಂಗಾಳಿ ನಟಿ, ಗಾಯಕಿ ರುಮಾ ಗುಹಾ ಥಾಕೂರಾ (84) ಇಂದು ತಮ್ಮ ಮನೆಯಲ್ಲಿ ತಮ್ಮ ಕೊನೆಯುಸಿರೆಳೆದಿದ್ದಾರೆ. ರುಮಾ ಗುಹಾ ಅವರ ಅಂತಿಮ ಸಂಸ್ಕಾರವು ಇಂದು ಸಂಜೆ ನೆರವೇರಲಿದ್ದು ಖ್ಯಾತ ಗಾಯಕ , ಮಗ ಅಮಿತ್‍ಕುಮಾರ್ ನೆರವೇರಿಸಲಿದ್ದಾರೆ.

ಖ್ಯಾತ ನಿರ್ದೇಶಕ ಸತ್ಯಜಿತ್ ರೇರ ಅಭಿಜಾನ್ (1962), ಗಾನಾಶತ್ರು (1989) ಚಿತ್ರಗಳಲ್ಲಿ ನಟಿಸಿದ್ದ ರುಮಾ ಗುಹಾ 1950ರಲ್ಲಿ ಬಾಲಿವುಡ್‍ನ ಖ್ಯಾತ ಗಾಯಕ ಕಿಶೋರ್‍ಕುಮಾರ್‍ರನ್ನು ವಿವಾಹವಾಗಿ 58ರಲ್ಲಿ ವಿಚ್ಚೇದನಗೊಂಡ ನಂತರ ಆರೂಪ್ ಗುಹಾ ಥಾಕೂರಾರನ್ನು ವಿವಾಹವಾದರು.

1958ರಲ್ಲಿ ಕೋಲ್ಕತ್ತಾ ಯೂತ್ ಚೋಯಿರ್ ಸಂಗೀತ ಶಾಲೆಯನ್ನು ಆರಂಭಿಸಿದ ರುಮಾರ ಪುತ್ರಿ ಸಾರೋಮೋನಾ ಗುಹಾ ಕೂಡ ಪ್ರಸಿದ್ಧ ಗಾಯಕಿಯಾಗಿದ್ದಾರೆ.
1944ರಲ್ಲಿ ಬಾಲಿವುಡ್‍ನ ಜನಪ್ರಿಯ ನಿರ್ದೇಶಕ ಅಮಿಯಾ ಚಕ್ರವರ್ತಿ ನಿರ್ದೇಶನದ ಜವಾರ್ ಭಟ್ಟ ಚಿತ್ರದಿಂದ ಚಿತ್ರ ಜೀವನ ಆರಂಭಿಸಿದ ರುಹಾ ಅಫ್‍ಸರ್,

ರಾಗರಾಂಗ್,ಗಂಗಾ ಹಿಂದಿ ಚಿತ್ರಗಳಲ್ಲದೆ ಪರ್ಸನಾಲ್ ಅಸಿಸ್ಟೆಂಟ್ ಚಿತ್ರದ ಮೂಲಕ ಬಂಗಾಳಿ ಚಿತ್ರದಲ್ಲಿ ನಟಿಸಿದ ನಂತರ ಫೋಲಾಟಾಕ್, ಭಾಗಿನಿ, ಬಾಯಿರಂಗ್ ಸೇರಿದಂತೆ, ಹಾಲಿವುಡ್‍ನ 36 ಚೌರಿಂಗೆಲಾನೆ, ದಿ ನಾಮೆಸಾಕೆ ಸೇರಿದಂತೆ ಸುಮಾರು 40ಕ್ಕೂ ಚಿತ್ರಗಳಲ್ಲಿ ನಟಿಸಿದ್ದಲ್ಲದೆ, ಲೋಕೋಚೂರಿ, ಟಿನ್ ಕೋನ್ಯಾ ಟೋ, ಬಕ್ಸ್‍ಸೋ ಬಾದಲ್, ಮೇರಾ ಧರ್ಮ್ ಮೇರಿ ಮಾ ಚಿತ್ರಗಳಲ್ಲಿ ಹಾಡುವ ಮೂಲಕ ಗಮನ ಸೆಳೆದಿದ್ದರು.

ಮಮತಾ ಬ್ಯಾನರ್ಜಿ ಸಂತಾಪ:  ಹಿರಿಯ ನಟಿ ರುಮಾ ಗುಹಾರ ನಿಧನದ ಸುದ್ದಿ ಕೇಳಿ ನನಗೆ ದುಃಖವಾಯಿತು. ಅವರು ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹೇಳಿದ್ದಾರೆ.  ರುಮಾ ಗುಹಾರ ನಿಧನಕ್ಕೆ ಬಂಗಾಳಿ ಚಿತ್ರರಂಗದ ಗಣ್ಯರು, ಸಂಗೀತ ಲೋಕದ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ