ಅಡುಗೆ ಮನೆ ತ್ಯಾಜ್ಯದಿಂದ ಗೊಬ್ಬರ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.10- ಒರಾಯನ್ ಮಾಲ್ ಅಡುಗೆ ಮನೆಯ ಹಸಿ ತ್ಯಾಜ್ಯವನ್ನು ಉತ್ಪಾದಕ ಬಳಕೆಗಾಗಿ ಒಂದು ಹೊಸ ಮಾರ್ಗವನ್ನು ಅನ್ವೇಷಿಸಿದೆ. ಆರ್ಗಾನಿಕ್ ಬಯೋ ಕನ್ವರ್ಟರ್ ಅಡುಗೆ ಮನೆಯ ಒಂದಿಡೀ ದಿನದ ತ್ಯಾಜ್ಯವನ್ನು ಪ್ರತಿದಿನದ ಗೊಬ್ಬರವಾಗಿ ಪರಿವರ್ತಿಸಲಿದೆ.

ಈ ಬಯೋಡಿಗ್ರೆಡೆಬಲ್ ಕನ್ವರ್ಟರ್ ಸಾಮಥ್ರ್ಯವು 2 ಟನ್‍ನಷ್ಟು ಇದೆ. ಇದು ಸರಿಸುಮಾರು 300 ಕೆ.ಜಿ ಹಸಿ ತ್ಯಾಜ್ಯವನ್ನು ಸಂಗ್ರಹಿಸಿ ಪ್ರತಿದಿನ 75 ಕೆಜಿಯಷ್ಟು ಗೊಬ್ಬರವನ್ನು ಉತ್ಪಾದಿಸುತ್ತದೆ. ಹಸಿ ತ್ಯಾಜ್ಯದಿಂದ ಗೊಬ್ಬರವಾಗಿ ಪರಿವರ್ತಿಸುವ ಈ ಪ್ರಕ್ರಿಯೆಯು 15 ದಿನಗಳಷ್ಟು ಕಾಲಾವಧಿ ತೆಗೆದು ಕೊಳ್ಳುತ್ತದೆ.

ಒರಾಯನ್ ಮಾಲ್ ಜಾಗೃತಿಯನ್ನು ಮೂಡಿಸುವುದರ ಜತೆಗೆ ಸುಸ್ಥಿರವಾದ ವ್ಯವಸ್ಥೆಯನ್ನು ನಿರ್ಮಿಸುವ ತನ್ನ ಪ್ರಯತ್ನವನ್ನು ಮುಂದುವರಿಸುತ್ತಲೇ ಇದೆ. ಇದು ಪ್ರತಿವರ್ಷ 18 ಮಿಲಿಯನ್ ನಷ್ಟು ಜನರು ಭೇಟಿ ನೀಡುವ ಕೇಂದ್ರವಾಗಿದೆ.

ಪರಿಸರವನ್ನು ಸಂರಕ್ಷಿಸುವ ಹಾಗೂ ಭವಿಷ್ಯದ ಅಗತ್ಯಗಳನ್ನು ಪೂರೈಸುವ ವಿಷಯದಲ್ಲಿ ನಾವು ಹಿನ್ನೆಡೆ ಯಲ್ಲಿದ್ದೇವೆ. ಈ ಸಂದರ್ಭದಲ್ಲಿ ಸನ್ನಿಹಿತ ವಾಗುತ್ತಿರುವ ಪರಿಸರ ಬಿಕ್ಕಟ್ಟನ್ನು ತಪ್ಪಿಸಲು ನಾವು ನಿರ್ಧಾರ ತೆಗೆದುಕೊಳ್ಳಬೇಕು. ಗಮನಹರಿಸಲೇಬೇಕಾದ ಒಂದು ಪ್ರಾಥಮಿಕ ವಿಷಯವೆನೆಂದರೆ ಮಾನವ ಚಟು ವಟಿಕೆಗಳ ಕಾರಣದಿಂದಾಗಿ ಅತ್ಯಧಿಕ ತ್ಯಾಜ್ಯ ಶೇಖರಣೆಗೊಂಡಿದೆ ಎಂದರು.

Facebook Comments