‘ಕಿವಿ’ ಹಣ್ಣನ್ನ ಏಕೆ ತಿನ್ನಬೇಕು..? ಇಲ್ಲಿವೆ 7 ಕಾರಣಗಳು

ಈ ಸುದ್ದಿಯನ್ನು ಶೇರ್ ಮಾಡಿ

ಆರೋಗ್ಯವನ್ನು ಸಂವರ್ಧಿಸಿಕೊಳ್ಳಲು ಹಾಗೂ ಪೌಷ್ಠಿಕತೆಗೆ ಸ್ವಾದಿಷ್ಟ ಕಿವಿಹಣ್ಣು. ಅತ್ಯಂತ ಸಮೃದ್ಧ ಪೌಷ್ಠಿಕಾಂಶಗಳು ಇರುವ ಹಣ್ಣುಗಳ ಪೈಕಿ ಕಿವಿಹಣ್ಣು ಒಂದು. ಇದರಲ್ಲಿ ವಿಟಮಿನ್ ಸಿ, ಆಹಾರ ನಾರು, ಆಕ್ಟಿನಿಡಿನ್, ಪೋಟ್ಯಾಷಿಯಂ ಮತ್ತು ಪೋಲೆಟ್ ಸಮೃದ್ಧವಾಗಿದೆ.

ಕೇವಲ ಒಂದೇ ಒಂದು ಕಿವಿಹಣ್ಣನ್ನು ತಿನ್ನುವುದರಿಂದ ದಿನನಿತ್ಯ ನಮಗೆ ಅಗತ್ಯವಾಗುವ ವಿಟಮಿನ್ ಸಿ ಪ್ರಮಾಣದ ಶೇ.17 ಮತ್ತು ಆಹಾರ ನಾರಿನ ಶೇ.21ರಷ್ಟು ಸಿಗುತ್ತದೆ. ಕಿವಿಹಣ್ಣಿನಲ್ಲಿ ಪೊಟ್ಯಾಷಿಯಂ ಮತ್ತು ವಿಟಮಿನ್ ಇ ಕೂಡ ಹೇರಳವಾಗಿದೆ.

ಕಿವಿಹಣ್ಣಿನಂತಹ ವಿಟಮಿನ್ ಸಿ ಸಮೃದ್ಧ ಹಣ್ಣನ್ನು ತಿನ್ನುವುದರಿಂದ ಉಬ್ಬಸದಿಂದ ಕೂಡಿದ ಆಸ್ತಮಾದೊಂದಿಗೆ ಸಂಬಂಧಪಟ್ಟಿರುವ ಶ್ವಾಸಕೋಶ ಸಂಬಂಧಿತ ರೋಗಗಳ ವಿರುದ್ಧ ಗಣನೀಯವಾದ ರಕ್ಷಣಾತ್ಮಕ ಪರಿಣಾಮ ಉಂಟಾಗುತ್ತದೆ.

ಹೆಚ್ಚುವರಿಯಾಗಿ ಪ್ರತಿದಿನ ಸ್ವಲ್ಪ ಕಿವಿಹಣ್ಣುಗಳನ್ನು ತಿನ್ನುವುದರಿಂದ ರಕ್ತ ಹೆಪ್ಪುಗಟ್ಟುವಿಕೆಯೂ ಗಣನೀಯವಾಗಿ ಕಡಿಮೆಯಾಗಿ ರಕ್ತದಲ್ಲಿ ಕೊಬ್ಬಿನ ಪ್ರಮಾಣ (ಟ್ರೈಗ್ಲಿಸರೈಡ್ಸ್)ವೂ ಕಡಿಮೆಯಾಗುವುದರಿಂದ ಹೃದ್ರೋಗ ಸಂಬಂಧಿತ ಕಾಯಿಲೆಗಳಿಂದ ರಕ್ಷಣೆ ಸಿಗುತ್ತದೆ.

ನಾರಿನಂಶ ತುಂಬಿರುವ ಈ ಹಣ್ಣು ಅಧಿಕ ಕೊಲೆಸ್ಟ್ರಾಲ್ ಮಟ್ಟಗಳನ್ನು ತಗ್ಗಿಸುವುದರಿಂದ ಹೃದ್ರೋಗದ ಅಪಾಯ ಕಡಿಮೆಯಾಗುವುದಲ್ಲದೆ ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನೂ ನಿಯಂತ್ರಣದಲ್ಲಿಡುತ್ತದೆ. ಇದು ಖನಿಜ ಪೊಟ್ಯಾಷಿಯಂನ ಉತ್ತಮ ಮೂಲವೂ ಹೌದು.

ಭೌಗೋಳಿಕವಾಗಿ ಪ್ರಶಸ್ತವಾಗಿರುವ ಚಿಲಿ ದೇಶದಲ್ಲಿ ಇದನ್ನು ಅತಿ ಹೆಚ್ಚು ಬೆಳೆಯಲಾಗುತ್ತದೆ. ಇದು ಆರೋಗ್ಯಕರ ಹಣ್ಣು. ಅಟಕಾಮಾ ಮರಳು ಭೂಮಿ, ಪೆಸಿಫಿಕ್ ಸಾಗರ, ಆಂಡಿಸ್ ಪರ್ವತಗಳು ಮತ್ತು ಪಟಗೋನಿಯಾದಂತಹ ಸರಿಸಾಟಿಯಿಲ್ಲದ ನೈಸರ್ಗಿಕ ಭೌಗೋಳಿಕ ಸರಹದ್ದುಗಳಿಂದ ಆವರಿಸಲ್ಪಟ್ಟಿರುವ ಚಿಲಿ ದೇಶವು ಸಮೃದ್ಧವಾದ ಮತ್ತು ಸತ್ವಯುತ ಮಣ್ಣನ್ನು ಹೊಂದಿದ್ದು, ಇಲ್ಲಿ ತಾಜಾ ಹಣ್ಣುಗಳ ಭಂಡಾರವೇ ಇದೆ.

ಇಂದು ಚಿಲಿ ದೇಶವು ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಕಿವಿಹಣ್ಣಿನ ಉತ್ಪಾದಕ ನಾಗಿದ್ದು, ಈ ಹಣ್ಣು ಮಾರ್ಚ್‍ನಿಂದ ನವೆಂಬರ್‍ವರೆಗೆ ಲಭ್ಯವಿರುತ್ತದೆ. ಚಿಲಿ ದೇಶವು ಭಾರತದೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದಿಂದಾಗಿ ಚಿಲಿಯನ್ ಕಿವಿಹಣ್ಣುಗಳು ನಮ್ಮ ಗ್ರಾಹಕರಿಗೆ ಹೆಚ್ಚು ಕೈಗೆಟಕುವ ದರಗಳಲ್ಲಿ ಲಭ್ಯವಾಗುತ್ತಿವೆ ಎಂಬುದು ವಿಶೇಷ.

Facebook Comments