ಐಪಿಎಲ್ನಿಂದ ಕೆಕೆಆರ್ ಸ್ಟಾರ್ ಆಟಗಾರ ಔಟ್
ಮುಂಬೈ, ಮೇ 13- ಐಪಿಎಲ್ 15ರ ಆವೃತ್ತಿಯಲ್ಲಿ ಗಾಯಾಳುಗಳ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ, ಈಗಾಗಲೇ ಸನ್ರೈಸರ್ಸ್ ಹೈದ್ರಾಬಾದ್ನ ವಾಷಿಂಗ್ಟನ್ ಸುಂದರ್, ನಟರಾಜನ್ ಗಾಯಗೊಂಡು ಆಡುವ 11ರ ಬಳಗದಿಂದ ಹೊರಗುಳಿದಿದ್ದರೆ, ಸಿಎಸ್ಕೆಯ ಮಾಜಿ ನಾಯಕ ರವೀಂದ್ರಾಜಾಡೇಜಾ ಗಾಯದಿಂದಾಗಿ ಇಡೀ ಟೂರ್ನಿಯನ್ನು ತೊರೆದಿದ್ದಾರೆ, ಈಗ ಅವರ ಸಾಲಿಗೆ ಕೆಕೆಆರ್ನ ಸ್ಟಾರ್ ಆಟಗಾರ ಪ್ಯಾಟ್ ಕಮ್ಮಿನ್ಸ್ ಸೇರ್ಪಡೆಯಾಗಿದ್ದಾರೆ.
ಸೊಂಟದ ಗಾಯದಿಂದ ಬಳಲುತ್ತಿರುವ ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಕೆಕೆಆರ್ ಫ್ರಾಂಚೈಸಿಗಳು ತಮ್ಮ ಅಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದಾರೆ.
ತಮ್ಮ ಅಲೌಂಡರ್ ಪ್ರದರ್ಶನದಿಂದ ತಂಡಕ್ಕೆ ಉತ್ತಮ ಕಾಣಿಕೆ ನೀಡುತ್ತಿದ್ದ ಪ್ಯಾಟ್ ಕಮ್ಮಿನ್ಸ್ ತಾನಾಡಿರುವ 5 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿರುವುದಲ್ಲದೆ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 14 ಎಸೆತಗಳಲ್ಲೇ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ಪ್ಯಾಟ್ ಕಮ್ಮಿನ್ಸ್ ಅವರು ಗಾಯಗೊಂಡಿರುವುದರಿಂದ ಶ್ರೀಲಂಕಾ ವಿರುದ್ಧ ನಡೆಯಲಿರುವ ಟ್ವೆಂಟಿ-20 ಸರಣಿಯಿಂದಲೂ ವಿಶ್ರಾಂತಿ ನೀಡಲಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತಿಳಿಸಿದೆ.