ಮುಕೇಶ್ ಅಂಬಾನಿಗೆ ಶುಕ್ರದೆಸೆ, ಕುದುರಿತು 5ನೇ ದೊಡ್ಡಡೀಲ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 22-ವಿಶ್ವದಟಾಪ್ 100 ಶ್ರೀಮಂತದಲ್ಲಿ ಸ್ಥಾನಪಡೆದಿರುವ ಹೆಸರಾಂತ ಉದ್ಯಮಿ ಮತ್ತು ರಿಲಾಯನ್ಸ್ ಸಮೂಹ ಸಂಸ್ಥೆಗಳ ಒಡೆಯ ಮುಕೇಶ್ ಅಂಬಾನಿ ಅವರಿಗೆ ಮತ್ತೆ ಶುಕ್ರದೆಸೆ ಖುಲಾಯಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿದೊಡ್ಡ ವ್ಯವಹಾರಗಳನ್ನು ಕುದುರಿಸುತ್ತಿರುವ ಅಂಬಾನಿಗೆ 5ನೇ ಡೀಲ್ ಸಾಕಾರಗೊಂಡಿದೆ.

ಅಮೆರಿಕದ ಖಾಸಗಿ ಬಂಡವಾಳ ಹೂಡಿಕೆ ಸಂಸ್ಥೆ ಕೆಕೆಆರ್ ಅಂಡ್ ಕಂಪನಿ ಇಂಕ್ ಅಂಬಾನಿ ಒಡೆತನದ ಜಿಯೋ ಪ್ಲಾಟ್‍ಫಾರಂನಲ್ಲಿ 11.367 ಕೋಟಿ ರೂ.ಗಳ ಬಂಡವಾಳ ಹೂಡಿದೆ.

ಇಂದು ಕಂಪನಿ ಪಾಲಿನಲ್ಲಿ ಶೇ. 2.32ರಷ್ಟು. ಕಳೆದ ನಾಲ್ಕು ವಾರಗಳಲ್ಲಿ ರಿಲಾಯನ್ಸ್ ಸಂಸ್ಥೆಗೆ ಕುದುರಿಸುವಐದನೇದೊಡ್ಡ ವಾಣಿಜ್ಯ ವ್ಯವಹಾರವಾಗಿದೆ.

ಈ ಹಿಂದೆರಿಲಾಯನ್ಸ್ ಡಿಟಿಜಲ್ ಯೂನಿಟ್‍ನಲ್ಲಿ ಫೇಸ್‍ಬುಕ್, ಸಿಲ್ವರ್ ಲೇಕ್, ವಿಸ್ಠಾ ಈಕ್ವಿಟಿ ಮತ್ತು ಜನರಲ್ ಅಂಟ್ಲಾಟಿಕ್ ಸಂಸ್ಥೆಗಳು ಒಟ್ಟು 67.194.75 ಕೋಟಿ ರೂ.ಗಳನ್ನು ತೊಡಗಿಸಿದೆ.

ಇದರೊಂದಿಗೆ ರಿಲಾಯನ್ಸ್ ಸಂಸ್ಥೆಯ ಬಂಡವಾಳದಲ್ಲಿ ಭಾರೀ ಏರಿಕೆಯಾಗಿದ್ದು, ಮುಕೇಶ್ ಅಂಬಾನಿ ಏಷ್ಯಾದ ನಂಬರ್‍ಒನ್ ಸಿರಿವಂತ ಪಟ್ಟ ಅಬಾಧಿತವಾಗಿದೆ.

Facebook Comments

Sri Raghav

Admin