ಇಂದು ಕೆಕೆಆರ್ ವಿರುದ್ಧ ಮುಂಬೈ ಕಾದಾಟ

ಈ ಸುದ್ದಿಯನ್ನು ಶೇರ್ ಮಾಡಿ

ಅಬುದಾಬಿ, ಸೆ. 23- ಹಾಲಿ ಐಪಿಎಲ್ ಚಾಂಪಿಯನ್ಸ್ ಆಗಿದ್ದರೂ 2020ರ ಆರಂಭಿಕ ಪಂದ್ಯದಲ್ಲಿ ರನ್ನರ್‍ಅಪ್ ಆಗಿದ್ದ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿರುವ ರೋಹಿತ್ ಬಳಗ ಇಂದು ಗೆಲುವಿಗಾಗಿ ದಿನೇಶ್‍ಕಾರ್ತಿಕ್ ಬಳಗದ ವಿರುದ್ಧ ಗೆಲುವಿಗಾಗಿ ಕಾದಾಟ ನಡೆಸಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್‍ಗೆ ಹೋಲಿಸಿದರೆ ಮುಂಬೈ ಇಂಡಿಯನ್ ತಂಡವು ಬಲಿಷ್ಠವಾಗಿದ್ದು ಐಪಿಎಲ್ ಇತಿಹಾಸದಲ್ಲೂ ಮುಂಬೈ ಇಂಡಿಯನ್, ಕೆಕೆಆರ್ ವಿರುದ್ಧ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದೆ.

ಇಂದಿನ ಪಂದ್ಯದಲ್ಲಿ 2012, 2014ರ ಐಪಿಎಲ್ ಚಾಂಪಿಯನ್ಸ್ ಹಾಗೂ ನಾಲ್ಕು ಬಾರಿ ವಿಜೇತರಾಗಿರುವ ಮುಂಬೈ ತಂಡ ಸೆಣಸುತ್ತಿರುವುದು ಕ್ರಿಕೆಟ್ ಅಭಿಮಾನಿಗಳ ಕ್ರೇಜ್ ಕೂಡ ಹೆಚ್ಚಿದೆ. ತನ್ನ ಹಿಂದಿನ ಪಂದ್ಯದಲ್ಲಿ ಸೋಲಿಗೆ ಕಾರಣವಾಗಿರುವ ಅಂಶಗಳತ್ತ ಗಮನ ಹರಿಸಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೆಕೆಆರ್ ತಂಡದ ವಿರುದ್ಧದ ಪಂದ್ಯದಲ್ಲಿ ತಿದ್ದುಕೊಂಡು ಗೆಲುವಿಗಾಗಿ ಹುಡುಕಾಟ ನಡೆಸಿದ್ದರೆ, 2020ರ ಆರಂಭಿಕ ಪಂದ್ಯದಲ್ಲೇ ಗೆಲ್ಲುವ ಮೂಲಕ ಸರಣಿ ಶುಭಾರಂಭ ಮಾಡಲು ಕಾರ್ತಿಕ್ ಬಳಗ ಚಿಂತಿಸಿದೆ.

ಮುಂಬೈ ಹಾಗೂ ಕೋಲ್ಕತ್ತಾ ಎರಡು ತಂಡಗಳು ಚುಟುಕು ಕ್ರಿಕೆಟ್ ಸ್ಪೆಷಾಲಿಸ್ಟ್‍ಗಳ ದಂಡೇ ಇರುವುದರಿಂದ ಪಂದ್ಯ ಕುತೂಹಲ ಮೂಡಿಸಿದೆ. ಮುಂಬೈ ತಂಡದಲ್ಲಿ ರೋಹಿತ್‍ಶರ್ಮಾ, ಕ್ಲಿಂಟನ್ ಡಿ ಕ್ಲಾಕ್‍ರ ಸ್ಟಾರ್ ಬಲ, ಕಿರಾನ್ ಪೋಲಾರ್ಡ್ , ಹಾರ್ದಿಕ್ ಪಾಂಡ್ಯಾ, ಕೇದಾರ್‍ಪಾಂಡ್ಯಾರ ಅಲೌಂಡರ್ ಆಟ, ಬೂಮ್ರಾ, ಪಟ್ಟಿಸನ್, ಬೋಲ್ಟ್‍ರಂತಹ ಸ್ಟಾರ್ ಬೌಲರ್‍ಗಳಿದ್ದು ಇಂದಿನ ಪಂದ್ಯದಲ್ಲಿ ಮುಂಬೈನ ಸ್ಟಾರ್ ಬೌಲರ್ ಮೆಕ್‍ಲೆಗನ್ 11ರ ಬಳಗದಲ್ಲಿ ಸ್ಥಾನ ಪಡೆಯಲು ಸಜ್ಜಾಗಿದ್ದಾರೆ.

ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್‍ನಲ್ಲೂ ಇಯಾನ್‍ಮಾರ್ಗನ್, ದಿನೇಶ್‍ಕಾರ್ತಿಕ್, ರಾಹುಲ್‍ತ್ರಿಪಾಠಿಯಂತಹ ಸ್ಫೋಟಕ ಬ್ಯಾಟ್ಸ್‍ಮನ್‍ಗಳು, ಆ್ಯಂಡ್ರೂ ರಸಲ್, ಸುನೀಲ್‍ನರೇನ್‍ರಂತಹ ಸ್ಟಾರ್ ಅಲ್‍ರೌಂಡರ್‍ಗಳು, ಪ್ಯಾಟ್ ಕುಮ್ಮಿನ್ಸ್, ಕುಲ್‍ದೀಪ್‍ಯಾದವ್‍ರಂತಹ ಬೌಲರ್‍ಗಳಿರುವುದರಿಂದ ಇಂದಿನ ಪಂದ್ಯವು ರೋಚಕತೆಯಿಂದ ಕೂಡಿರಲಿದೆ.

Facebook Comments