ಕೊರೊನಾ ವಾರಿಯರ್ಸ್‍ ನೆರವಿಗೆ ಮುಂದಾದ ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 30- ಕೊರೊನಾ ವೈರಸ್‍ನಿಂದ ಬಳಲುತ್ತಿರುವ ಜನರ ನೆರವಿಗೆ ಸಿನಿತಾರೆಯರು, ಕ್ರಿಕೆಟ್ ಕಲಿಗಳು ನೆರವು ನೀಡುತ್ತಲೇ ಇದ್ದಾರೆ, ನಮ್ಮ ಕರ್ನಾಟಕದ ಆಟಗಾರರು ಕೂಡ ಹಿಂದೆ ಬಿದ್ದಿಲ್ಲ ಎಂಬುದನ್ನು ಕೆ.ಎಲ್. ರಾಹುಲ್ ಕೂಡ ತೋರ್ಪಡಿಸಿದ್ದಾರೆ.

ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಕೊರೊನಾದಿಂದಾಗಿ ದೇಶ ಹಾಗೂ ರಾಜ್ಯಗಳು ಹೊರಡಿಸಿದ್ದ ಲಾಕ್‍ಡೌನ್‍ನಿಂದ ನೊಂದ ಜನತೆಗೆ ನೆರವು ನೀಡಿದ್ದ ರಾಹುಲ್ ಈಗ ಮತ್ತೊಮ್ಮೆ ನೆರವು ನೀಡಲು ಮುಂದಾಗಿದ್ದಾರೆ.

ಭಾರತ ತಂಡದ ಪ್ರಮುಖ ಆಟಗಾರರಾಗಿರುವ ಕೆ.ಎಲ್.ರಾಹುಲ್ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಸೇವೆಯನ್ನು ಮುಕ್ತವಾಗಿ ಪ್ರಶಂಸಿಸಿರುವ ಅವರು, ಅವರ ನೆರವಿಗಾಗಿ ತಮ್ಮ ಪೂಮಾ ಶೂಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಂದ ಹೋರಾಟದಿಂದಲೇ ಇಂದು ಕೊರೊನಾವನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಿದೆ, ಅವರ ಸೇವೆ ನಿರಂತರವಾಗಿರಲಿ ಅವರಿಗೆ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ.

ಇತ್ತೀಚೆಗೆ ಕೆ.ಎಲ್.ರಾಹುಲ್ ಆವೇರ್ ಫೌಂಡೇಷನ್ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಬ್ಯಾಟ್, ಹೆಲ್ಮೆಟ್, ಗ್ಲೌಸ್, ಪ್ಯಾಡ್ ಮತ್ತಿತರ ವಸ್ತುಗಳನ್ನು ಹರಾಜಿಟ್ಟಿದ್ದರು, ಆಗ ಅವರ ಬ್ಯಾಟ್ 2.64 ಲಕ್ಷ ರೂ.ಗೆ ಮಾರಾಟವಾಗಿತ್ತು ಅಲ್ಲದೆ ಆ ಹರಾಜಿನಲ್ಲಿ ಒಟ್ಟು 8 ಲಕ್ಷ ರೂ.ಗಳು ಬಂದಿದ್ದವು.

Facebook Comments