ನ್ಯೂಜಿಲೆಂಡ್ ಪ್ರವಾಸ: ಕೆ.ಎಲ್.ರಾಹುಲ್‍ಗೆ ಕೀಪಿಂಗ್ ಹೊಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.20- ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಎರಡು ಪಂದ್ಯಗಳಲ್ಲೇ ಅತ್ಯುತ್ತಮ ವಿಕೆಟ್ ಕೀಪಿಂಗ್ ಮಾಡಿರುವ ಕೆ.ಎಲ್.ರಾಹುಲ್ ಅವರೇ ನ್ಯೂಜಿಲೆಂಡ್ ವಿರುದ್ಧವೂ ಕೀಪರ್ ಪಾತ್ರ ನಿರ್ವಹಿಸಲಿದ್ದಾರೆ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ. ಕಳೆದ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಸರಣಿ ಜಯ ಸಾಧಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ತಂಡದ ಕೀಪಿಂಗ್ ಹೊಣೆಯನ್ನು ಹೊತ್ತಿದ್ದ ಯುವ ಆಟಗಾರ ರಿಷಭ್ ಪಂತ್ ಅವರು ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯದಲ್ಲೇ ಗಾಯಗೊಂಡಿದ್ದರಿಂದ ಅವರ ಸ್ಥಾನವನ್ನು ಕೆ.ಎಲ್.ರಾಹುಲ್ ಅವರು ವಹಿಸಿಕೊಂಡಿದ್ದರು.

ರಾಹುಲ್ ಆಡಿದ ಎರಡು ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರಿರುವುದೇ ಅಲ್ಲದೆ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಮುಂಬರುವ ಚುಟುಕು ಕ್ರಿಕೆಟ್‍ನ ದೃಷ್ಟಿಯಿಂದಲೂ ರಾಹುಲ್ ಅವರನ್ನು ಕೀಪಿಂಗ್ ವಿಭಾಗದಲ್ಲಿ ಸದೃಢ ಗೊಳಿಸಬೇಕಾಗಿರುವುದರಿಂದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲೂ ರಾಹುಲ್ ಅವರಿಗೆ ಕೀಪಿಂಗ್ ಹೊಣೆ ಕೊಡಲಾಗುವುದು ಎಂದು ಹೇಳಿರುವುದರಿಂದ ರಿಷಭ್ ಪಂತ್ ಸ್ಥಾನ ಅಲುಗಾಡುವ ಸಂಭವ ಹೆಚ್ಚಿದೆ. ಭಾರತವು ನ್ಯೂಜಿಲೆಂಡ್‍ನಲ್ಲಿ 5 ಟ್ವೆಂಟಿ-20 ಪಂದ್ಯಗಳನ್ನು ಆಡಲಿದ್ದು ತಂಡವು ಇಂದು ಅಲ್ಲಿಗೆ ತೆರಳಲಿದೆ.

Facebook Comments