SHOCKING : ಶೀಘ್ರದಲ್ಲೇ ಬಸ್ ಪ್ರಯಾಣ ದರ ಏರಿಕೆ ಆಗೋದು ಪಕ್ಕಾ..!

ಈ ಸುದ್ದಿಯನ್ನು ಶೇರ್ ಮಾಡಿ

ksrtc

ಮಂಡ್ಯ,ಅ.3- ಸಾರಿಗೆ ಇಲಾಖೆ ಮೇಲೆ ಈಗಾಗಲೇ ಆರು ಸಾವಿರ ಕೋಟಿ ಸಾಲ ಇದೆ.1,20,000 ನೌಕರರ ಭವಿಷ್ಯ ಇಲಾಖೆ ಮೇಲಿದೆ. ಜೊತೆಗೆ ಸಾರಿಗೆ ಇಲಾಖೆಯನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಬಸ್ ದರ ಏರಿಕೆ ಮಾಡಲೇಬೇಕಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ.18ರಷ್ಟು ಬಸ್ ದರ ಏರಿಕೆ ಮಾಡಲು ತೀರ್ಮಾನಿಸಿದ್ದೆವು. ಆದರೆ ಜನರಿಗೂ ಹೊರೆಯಾಗಬಾರದು. ಇಲಾಖೆಗೂ ತೊಂದರೆಯಾಗಬಾರದು. ಹಾಗಾಗಿ ಶೇ.18ಕ್ಕಿಂತ ಆದಷ್ಟು ಕಡಿಮೆ ಪ್ರಮಾಣದಲ್ಲಿ ದರ ಏರಿಸಲು ಚಿಂತಿಸಿದ್ದೇವೆ ಎಂದು ತಿಳಿಸಿದರು.

ಬಸ್ ದರ ಏರಿಕೆ ಮಾಡುವ ವಿಚಾರ ಮುಖ್ಯಮಂತ್ರಿಗಳ ಅಂಗಳದಲ್ಲಿದೆ. ನಾಳೆ ಸಾರಿಗೆ ಇಲಾಖೆಯ ರಿವ್ಯೂವ್ ಮೀಟಿಂಗ್ ಇದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದರಂತೆ ಬಸ್ ದರ ಏರಿಕೆಯಾಗಲಿದೆ ಎಂದು ಸ್ಪಷ್ಟಪಡಿಸಿದರು. ಏಪ್ರಿಲ್ 1ರಿಂದ ಇದುವರೆಗೆ ಒಂದು ಲೀಟರ್ ಪೆಟ್ರೋಲ್‍ಗೆ 13.5 ರೂ. ಏರಿಕೆಯಾಗಿದೆ. ಹೀಗೆ ದಿನೇ ದಿನೇ ಡೀಸೆಲ್ ಪೆಟ್ರೋಲ್ ದರ ಏರಿಕೆಯಾಗುತ್ತಿರುವುದರಿಂದ ಸಾರಿಗೆ ಇಲಾಖೆಗೆ ಹೊರೆಯಾಗುತ್ತದೆ ಎಂದರು.

ನಾವು ಬಸ್ ದರ ಏರಿಸಿದರೆ ಖಾಸಗಿಯವರು ಕೂಡ ಬಸ್ ದರ ಏರಿಕೆ ಮಾಡುತ್ತಾರೆ. ಹಾಗಾಗಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ನಾಳೆ ರಿವ್ಯೂವ್ ಮೀಟಿಂಗ್‍ನಲ್ಲಿ ಶೇಕಡಾ ಎಷ್ಟರಷ್ಟು ದರ ಏರಿಸಬೇಕೆಂದು ಚರ್ಚಿಸಿ ಮುಖ್ಯಮಂತ್ರಿಗಳಿಗೆ ತಿಳಿಸಲಾಗುವುದು. ನಂತರ ಸಿಎಂ ತೀರ್ಮಾನದಂತೆ ದರ ಏರಿಕೆಯಾಗಲಿದೆ. ಆದರೆ ಇದು ಅನಿವಾರ್ಯ ಎಂದು ಡಿ.ಸಿ.ತಮ್ಮಣ್ಣ ಸ್ಪಷ್ಟಪಡಿಸಿದರು.

ಎಚ್ಚರಿಕೆ  : ‘ಈ ಸಂಜೆ’ ಸುದ್ದಿಗಳನ್ನು ನಕಲು ಮಾಡುವವರ  ವಿರುದ್ಧ ಕಾನೂನು  ಕ್ರಮ ಕೈಗೊಳ್ಳಲಾಗುವುದು

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin