ತೆಂಗು ಬೆಳೆಗಾರರ ಬದುಕು ಅತಂತ್ರ, ಸರ್ಕಾರಗಳು ಕೊಬ್ಬರಿ ಖರೀದಿಗೆ ಮುಂದಾಗಬೇಕು : ಶಿವಲಿಂಗೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಅರಸೀಕೆರೆ, ಮೇ 26- ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು , ತೆಂಗು ಬೆಳೆಗಾರರ ಬದುಕು ಅತಂತ್ರವಾಗುತ್ತಿದೆ.ಕೂಡಲೇ ರಾಜ್ಯ ಮತ್ತು ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ನಪೆಡ್ ಮೂಲಕ ಕೊಬ್ಬರಿ ಖರೀದಿಗೆ ಮುಂದಾಗಬೇಕೆಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಇದೇ ಅವಯಲ್ಲಿ ಕ್ವಿಂಟಲï ಕೊಬ್ಬರಿ ಬೆಲೆ 17,000ದಿಂದ 18,000ರೂ.ವರೆಗೆ ವಹಿವಾಟು ನಡೆದಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ 8600 ರಿಂದ 9000ರೂ.ಗೆ ಕುಸಿದಿದ್ದು, ತೆಂಗು ಬೆಳೆಗಾರರ ಬದುಕು ಬೀದಿಪಾಲಾಗುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದ ಲಕ್ಷಾಂತರ ತೆಂಗು ಬೆಳೆಗಾರರು ದರ ಕುಸಿತದಿಂದ ಕಂಗಾಲಾಗಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಕೊರೊನಾ ಹೆಸರೇಳಿಕೊಂಡು ಸರ್ಕಾರ ನುಣುಚಿಕೊಳ್ಳುವುದನ್ನು ಬಿಟ್ಟು ಕೂಡಲೇ ತೆಂಗು ಬೆಳೆಗಾರರ ನೆರವಿಗೆ ಧಾವಿಸದೇ ಹೋದರೆ ರೈತರ ಹಿತದೃಷ್ಟಿಯಿಂದ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಸಿಎಂಗೆ ಮನವಿ ಪತ್ರ: ಪ್ರತಿಭಟನೆಗೂ ಮುನ್ನ ಜವಾಬ್ದಾರಿಯುತ ಒಬ್ಬ ಜನಪ್ರತಿನಿಯಾಗಿ ತೆಂಗು ಬೆಳೆಗಾರರ ಪರವಾಗಿ ಸ್ವತಃ ನಾಳೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತೆಂಗು ಬೆಳೆಗಾರರ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುತ್ತೇನೆ.

ನನ್ನ ಮನವಿಗೆ ಉತ್ತಮ ರೀತಿಯಲ್ಲಿ ಸ್ಪಂದನೆ ವ್ಯಕ್ತವಾಗದಿದ್ದರೆ ತೆಂಗು ಬೆಳೆಗಾರರ ಹಿತದೃಷ್ಟಿಯಿಂದ ಮತ್ತೊಮ್ಮೆ ಅಹೋರಾತ್ರಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಶಿವಲಿಂಗೇಗೌಡ ಹೇಳಿದ್ದಾರೆ.

Facebook Comments

Sri Raghav

Admin