ಬೇರೆ ಯುವಕನೊಂದಿಗೆ ಚಾಟ್: ಪ್ರೇಯಸಿಗೆ ಚಾಕು ಇರಿತ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಏ.23- ಬೇರೆ ಯುವಕನೊಂದಿಗೆ ಚಾಟ್ ಮಾಡುತ್ತಿದ್ದ ಪ್ರೇಯಸಿಯ ಮೇಲೆ ಅನುಮಾನಗೊಂಡ ಪ್ರಿಯಕರ ಆಕೆಗೆ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ ನಡೆದಿದೆ. ನಂಜನಗೂಡಿನ ಶ್ರೀರಾಮಪುರದ 26 ವರ್ಷದ ಯುವತಿಯನ್ನು ಆಕೆಯ ಪ್ರಿಯಕರ
ಎಚ್.ಡಿ.ಕೋಟೆಯ ಅಂತರಸಂತೆ ವಾಸಿ ರಮೇಶ್ (28) ಎಂಬಾತ ಇರಿದು ಗಾಯಗೊಳಿಸಿದ್ದಾನೆ.

ಕಳೆದ ನಾಲ್ಕು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಯುವತಿ ಮೊಬೈಲ್‍ಗೆ ಬರುತ್ತಿದ್ದ ಮೆಸೆಜ್‍ಗಳನ್ನು ತನ್ನ ಮೊಬೈಲ್‍ಗೆ ಬರುವಂತೆ ರಮೇಶ್ ಮಾಡಿಕೊಂಡಿದ್ದ. ಯುವತಿ ಬೇರೆ ಯುವಕರೊಂದಿಗೆ ಚಾಟ್ ಮಾಡುತ್ತಿದ್ದುದನ್ನು ಕಂಡು ಅನುಮಾನ ಹಾಗೂ ಆಕ್ರೋಶಗೊಂಡು ರಮೇಶ್ ನಿನ್ನೆ ಸಂಜೆ ನಗರದ ಶ್ರೀಹರ್ಷ ರಸ್ತೆಯಲ್ಲಿ ಪ್ರಿಯತಮೆಗೆ ಚಾಕುವಿನಿಂದ ಇರಿದಿದ್ದಾನೆ.

ಸಾರ್ವಜನಿಕರು ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ರಮೇಶ್‍ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಲಷ್ಕರ್‍ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ವಿಚಾರಣೆಗೊಪಡಿಸಿದ್ದಾರೆ.

Facebook Comments