ಕೊರೋನ ಕುರಿತು ಮತ್ತೊಂದು ಭವಿಷ್ಯ ನುಡಿದ ಕೋಡಿ ಶ್ರೀಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಜಗತ್ತನ್ನು ತೀವ್ರವಾಗಿ ಕಾಡುತ್ತಿರುವ ಕೊರೋನಾ ವ್ಯಾಧಿಯಿಂದ‌‌ ಭಾರತಕ್ಕೆ ಯಾವುದೇ ಧಕ್ಕೆ ಇಲ್ಲಾ ಎಂದು ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಇನ್ನು ಅನೇಕ‌ ಸಂಗತಿಯನ್ನು ತಿಳಿಸಿರುವ ಅವರು ಕೊರೋನಾ ಸೋಂಕು ಜಗತ್ತಿನಲ್ಲಿ ಇನ್ನೂ ಉಲ್ಭಣವಾಗುವ ಲಕ್ಷಣವಿದೆ. ಭೂಪಟದಲ್ಲಿ ಒಂದು ದೇಶ ಸಂಪೂರ್ಣ ನಾಶವಾಗಲಿದೆ.  ಕೊರೋನಾ ವ್ಯಾಧಿ ಜಗತ್ತಿಗೆ ಮುತ್ತಿಗೆ ಹಾಕಿ ಕೊಲ್ಲುತ್ತಾ ಹೋದರೂ ಭಾರತಕ್ಕೆ ಯಾವುದೇ ಅಪಾಯವಿಲ್ಲ ಮುಂದಿನ ಮೇ ಅಂತ್ಯ ದ ವೆಳೆಗೆ ರೋಗದ ತೀವ್ರತೆ ಕಡಿಮೆಯಾಗಲಿದೆ ಎಂದಿದ್ದಾರೆ.

ದೇಶದಲ್ಲಿ ಹೊಸ ಶಾಸನ ಬರುವ ನಿರೀಕ್ಷೆಯಿದೆ ಇದು ಜನವಿರೋಧಿ ಯಾಗಬಾರದು ಇದರಿಂದ ದೇಶದ ನಾಯಕನಿಗೆ ಕಂಟಕವಾಗಲಿದೆ .ಗಿಡ, ಮರ, ಪ್ರಾಣಿಗಳಿಗೂ ಈ ಕೊರೋನಾ ಸೋಂಕು ಘೋರವಾಗಿ ಅಪ್ಪಳಿಸಲಿದೆ. ಮಳೆಯು ಹೆಚ್ಚು ಬೀಳಲಿದೆ ಬಿದ್ದ ಭೂಮಿ ಗೆ ಹೆಚ್ಚು ಮಳೆಯಾಗಿ ಜಲಪ್ರಳಯವಾಗುವ ಲಕ್ಷಣ ಹೆಚ್ಚಿದೆ ಎಂದು‌ ಶ್ರೀಗಳು ಹೇಳಿದ್ದಾರೆ.

ಪ್ರತಿಯೊಬ್ಬರು ಅವರವರ ಇಷ್ಟದೇವರ ಪ್ರಾರ್ಥನೆ ಸಲ್ಲಿಸಬೇಕು.  ಅಕ್ಷಯ ನಾಮ ತೃತೀಯದವರೆಗೂ ಈ ಕೊರೋನಾ ಅಬ್ಬರಿಸುತ್ತದೆ. ಮೇ ಅಂತ್ಯದ ವೇಳೆಗೆ ಒಂದು ಅವಸ್ಥೆ ತಲುಪುತ್ತದೆ. ಹೀಗಾಗಿ ಜನರು ಭಯ ಬೀಳುವ ಅವಶ್ಯಕತೆ ಇಲ್ಲ. ಪ್ರಕೃತಿ ಕೊಟ್ಟಿರುವ ರೋಗಕ್ಕೆ ಪ್ರಕೃತಿಯಿಂದಲೇ ಔಷಧಿ ದೊರೆಯಲಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಈ  ರೋಗ ಎಷ್ಟೇ ಎತ್ತರಕ್ಕೆ ಹೋದರೂ ಈ ಭೂಮಿಯ ಪುಣ್ಯ ಫಲದಿಂದ ತನ್ನನ್ನು ತಾನೇ ಕಳೆದುಕೊಳ್ಳುತ್ತದೆ.  ಜಗತ್ತಿನ ಭೂಪಟದಲ್ಲಿ ಒಂದು ದೇಶ ಸಂಪೂರ್ಣ ನಾಶವಾಗಲಿದೆ. ಈ ರೋಗಕ್ಕೆ ಮದ್ದು ಸಿಗಲಿದೆ. ಹೊಸ ಶಾಸನ ಬರುವ ನಿರೀಕ್ಷೆಯಿದೆ. ಬರುವ ಶಾಸನಗಳನ್ನು ಅರಸ ಅರಿತು ಮಾಡಿದರೆ ಒಳಿತು. ಅತೃಪ್ತ ಪ್ರಜೆಗಳು ಅರಸನ ವಿರುದ್ಧ ದಂಗೆ ಏಳಬಹುದು. ಅರಸು ಪಟ್ಟಕ್ಕೂ ಭಂಗವಾಗುವ ಲಕ್ಷಣವಿದೆ. ಶಾಸನಗಳು ಮಾರಕ, ಪೂರಕವಾಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

ಈ ರೋಗದಿಂದ ಅನೇಕ ಅರಸರು ನಿಯಂತ್ರಣ ಮಾಡಲಾಗದೆ, ಪ್ರಜೆಗಳ ನಿಯಂತ್ರಣ ಮಾಡಲಾಗದೆ ಪಟ್ಟ ಕಳೆದುಕೊಳ್ಳುವ ಲಕ್ಷಣವಿದೆ.  ಇನ್ನು, ಇದೇ  ವೇಳೆ ಸಿಎಂ ಬಿ.ಎಸ್.ಯಡಿಯೂ ರಪ್ಪನವರ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಈ ನಾಡಿನ ಅರಸನಿಗೆ ಯಾವುದೇ ಭಂಗವಿಲ್ಲ. ಅದರಿಂದ ಮುಂದೆ ಸುಖ, ದುಃಖ ಮಿಶ್ರವಾಗಿ ಬಂದರೂ ದೊರೆಗೆ ಕಂಟಕವಾಗಲಿದೆ ಎಂದು ನುಡಿದಿದ್ದಾರೆ.

ಆಶ್ವೀಜದಿಂದ ಕಾರ್ತೀಕದವರೆಗೆ ಹಳ್ಳಿಗಳಲ್ಲಿ ಭಂಗವಾಗಲಿದೆ. ಗ್ರಾಮೀಣ ಪ್ರದೇಶಗಳು ತಲ್ಲಣಗೊಂಡಾವು. ಮಳೆಯ ಲಕ್ಷಣ ಇದ್ದರೂ ಅದೂ ಕೂಡ ಆಪತ್ತಾಗಲಿದೆ. ಬೆಂಕಿ ನಾಲಿಗೆ ಚಾಚಲಿದೆ. ಭೂಮಿಯಲ್ಲಿ ದೈವ ಸಾಕ್ಷಾತ್ಕಾರದಿಂದ ಹೇಳುವಂತ ಅಪಾಯವಿಲ್ಲ. ದೊಡ್ಡ ದೊಡ್ಡ ನಗರಗಳಿಗೆ ತೊಂದರೆ ಇದೆ ಎಂದು ಭವಿಷ್ಯ ಹೇಳಿದ್ದಾರೆ.

ಮನೆಯಲ್ಲಿ ಮಾವು, ಬೇವು, ಬೇಟೆ ಸೊಪ್ಪು ಇಡಬೇಕು. ರಾತ್ರಿ ಮಲಗುವಾಗ ಬಿಲ್ವಪತ್ರೆ ತಲೆಗೆ ಸುತ್ತಿ ಮಲಗಬೇಕು. ಗೃಹದಲ್ಲಿ ನಿತ್ಯ ದೀಪ ಉರಿಸಬೇಕು. ಕೋರೋನಾ ಮೇ ತಿಂಗಳಲ್ಲಿ ನಿರ್ನಾಮವಾಗಲಿದೆ. ಸ್ವಲ್ಪ ಎಚ್ಚರ ತಪ್ಪಿದರೂ ವರ್ಷಪೂರ್ತಿ ಇರಲಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಆಳುವ ಅರಸರಿಗೆ ತೊಂದರೆಯಿಲ್ಲ. ಅರಸ ತಾನೇ ಶಸ್ತ್ರಾಸ್ತ್ರ ತ್ಯಾಗ ಮಾಡಿದರೆ ಕೇಂದ್ರಕ್ಕೆ ಹೋಗುವ ಅವಕಾಶ ಇದೆ ಎಂದು ಹೇಳಿದ್ದಾರೆ.

Facebook Comments

Sri Raghav

Admin