ಶಾಕಿಂಗ್ ನ್ಯೂಸ್ : ಅಕ್ಟೋಬರ್‌ನಲ್ಲೂ ಕರ್ನಾಟಕವನ್ನು ಕಾಡಲಿದೆ ಭೀಕರ ಪ್ರಕೃತಿ ವಿಕೋಪ..! ಕೋಡಿಶ್ರೀ ಭವಿಷ್ಯ‌..!!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ರಾಜ್ಯದಲ್ಲಿ ನೆರೆ ಹಾವಳಿ ಮುಂದುವರೆದಿದ್ದು ಕೋಡಿ ಮಠ ಶ್ರೀಗಳ ಭವಿಷ್ಯ ಸತ್ಯವಾಗಿದೆ ಮುಂದಿನ ತಿಂಗಳು ಇನ್ನಷ್ಟು ಪ್ರಾಕೃತಿಕ ವಿಕೋಪಗಳು ಸಂಭವಿಸಲಿದೆ ಎಂದು ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಕೋಡಿಮಠ ಶ್ರೀಗಳು ತಮ್ಮ ಭವಿಷ್ಯದಲ್ಲಿ ಆಗಸ್ಟ್ ತಿಂಗಳಲ್ಲಿ ವಿಪರೀತ ಜಲ ಪ್ರಳಯವಾಗಲಿದೆ ಎಂದು ಹೇಳಿದ್ದರು ನಂತರ ಅಕ್ಟೋಬರ್ ತಿಂಗಳಲ್ಲಿ ವಾಯು ಆಘಾತ ಹಾಗೂ ಭೂ ಕುಸಿತಗಳು ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ .

ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಗೋಚರಿಸಿರುವ ಹಿನ್ನೆಲೆಯಲ್ಲಿ ಈ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸುತ್ತಿದೆ ಎಂದು ವಿವರಿಸಿರುವ ಅವರು ಮುಂದಿನ ದಿನದಲ್ಲಿ‌ ಇನ್ನಷ್ಟು ತೊಂದರೆ ಅನುಭವುಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಹಿಂದೆಯೂ ಸಹ ಶ್ರೀಗಳು ಹಲವು ಬಾರಿ ಹೇಳಿದ ಭವಿಷ್ಯ ನಿಜವಾಗಿದ್ದು ರಾಜಕೀಯ ಸೇರಿದಂತೆ ಹಲವು ಭವಿಷ್ಯಗಳನ್ನು ನಿಜವಾಗಿದ್ದು ಅದರಂತೆ ಕಳೆದ ಕೆಲ ದಿನಗಳ ಹಿಂದೆ ನುಡಿದಿರುವ ಈ ಭವಿಷ್ಯ ಸತ್ಯವಾಗಿದೆ.‌

ಅವರ ನುಡಿದಿರುವ ಮುಂದಿನ ಅಕ್ಟೋಬರ್‌ ತಿಂಗಳ ಪ್ರಕೃತಿ ವಿಕೊಪದ ಮುನ್ಸೂಚನೆ ಭವಿಷ್ಯ ನಿಜವಾದಲ್ಲಿ ಇನ್ನಷ್ಟು ಜನಜಾನುವಾರು ಗಳಿಗೆ ಅಪಾಯ ಖಚಿತವಾಗಲಿದಯೇ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಕಾಡದಿರದು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin