ಕೊಹ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತದ ಅಥ್ಲೀಟ್..!

ಈ ಸುದ್ದಿಯನ್ನು ಶೇರ್ ಮಾಡಿ

Kohli-n
ನ್ಯೂಯಾರ್ಕ್, ಜೂ.6- ಕ್ರಿಕೆಟ್ ಅಂಗಳವಿರಲಿ, ಆಚೆಯಾಗಲಿ ಸದಾ ಒಂದಲ್ಲೊಂದು ದಾಖಲೆ ನಿರ್ಮಿಸುವ ವಿರಾಟ್ ಕೊಹ್ಲಿ ಈಗ ನೂತನವಾಗಿ ಪ್ರಕಟಿಸಿರುವ ಫೋಬ್ರ್ಸ್ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಭಾರತದ ಅತ್ಯಧಿಕ ಹಾಗೂ ವಿಶ್ವದ 83ನೆ ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್ ಆಗಿ ಬಿಂಬಿತಗೊಂಡಿದ್ದಾರೆ. ಐಪಿಎಲ್ 17 ಕೋಟಿಅನ್ನು ತನ್ನ ಜೇಬಿಗಿಳಿಸಿಕೊಂಡಿದ್ದ ವಿರಾಟ್, ಬಿಸಿಸಿಐ ನೂತನವಾಗಿ ಪ್ರಕಟಿಸಿದ ಆಟಗಾರರ ವಿಂಗಡಣೆಯಲ್ಲಿ ಎ+ ಕೆಟಗರಿಯಲ್ಲಿ ಗುರುತಿಸಿಕೊಂಡಿರುವ ಕೊಹ್ಲಿ ವಾರ್ಷಿಕ 1 ಮಿಲಿಯನ್ ಡಾಲರ್ ಗಳಿಸುತ್ತಿದ್ದಾರೆ.

ಜಾಹಿರಾತುಗಳಲ್ಲೂ ನಂಬರ್ 1 ಕ್ರಿಕೆಟಿಗ ಎಂದು ಬಿಂಬಿಸಿಕೊಂಡಿರುವ ಕೊಹ್ಲಿ ಪೂಮಾ, ಪೆಪ್ಸಿ, ಆಡಿ, ಓಕ್ಲೆ ಕಂಪನಿಗಳೊಂದಿಗೂ ಒಡಂಬಡಿಕೆ ಮಾಡಿಕೊಂಡಿರುವುದರಿಂದ ವಾರ್ಷಿಕ ಆದಾಯವನ್ನು 24 ಮಿಲಿಯನ್ ಡಾಲರ್ (1,610 ಕೋಟಿ ರೂ.)ಗಳಷ್ಟು ಹೆಚ್ಚಿಸಿಕೊಡಿರುವ ಕೊಹ್ಲಿ ಈ ಕೀರ್ತಿಗೆ ಭಾಜನರಾಗಿದ್ದಾರೆ.

ನಂಬರ್ 1 ಸ್ಥಾನದಲ್ಲೇ ಮುಂದುವರೆದ ಫ್ಲೋಡ್ ಮೇವರ್ತ್ :
ಕಳೆದ 3 ವರ್ಷಗಳಿಂದಲೂ ಅತಿ ಹೆಚ್ಚು ಗಳಿಕೆ ಮಾಡುವವರ ಸಾಲಿನಲ್ಲಿ ಅಗ್ರಶ್ರೇಣಿಯಾಗಿರುವ ಅಮೆರಿಕಾದ ಶ್ರೇಷ್ಠ ಬಾಕ್ಸರ್ ಫ್ಲೋಡ್ ಮೇವರ್ತ್ ಈ ಬಾರಿಯೂ ತನ್ನ ಒಟ್ಟು ಸಂಪಾದನೆಯನ್ನು 285 ಮಿಲಿಯನ್ ಡಾಲರ್‍ಗಳೇರಿಸಿಕೊಳ್ಳುವ ಮೂಲಕ ನಂಬರ್ 1 ಅಥ್ಲೀಟ್ ಆಗಿದ್ದಾರೆ.
ರೋನಾಲ್ಡ್ , ಮೆಸ್ಸಿ ಪೈಪೋಟಿ
ಫುಟ್ಬಾಲ್ ಅಂಗಳದಲ್ಲಿ ಗೋಲು ಗಳಿಸಲು ಪೈಪೋಟಿ ನಡೆಸುವ ಅರ್ಜೆಂಟೈನಾದ ಲಿಯೋನ್ ಮೆಸ್ಸಿ ಹಾಗೂ ಬ್ರಿಜಿಲ್‍ನ ಕ್ರಿಸ್ಟಿಯಾನೋ ರೋನಾಲ್ಡೊ ವಾರ್ಷಿಕ ಗಳಿಕೆಯ ರೇಸ್‍ನಲ್ಲೂ ಪೈಪೋಟಿಗೆ ಬಿದ್ದಂತಿದೆ. ಮೆಸ್ಸಿ ವಾರ್ಷಿಕವಾಗಿ ತಮ್ಮ ವೇತನ ಹಾಗೂ ಇತರೆ ಮೂಲಗಳಿಂದ 111 ಮಿಲಿಯನ್ ಡಾಲರ್‍ಗಳ ಗಳಿಕೆ ಮಾಡುವ ಮೂಲಕ 2ನೆ ಸ್ಥಾನದಲ್ಲಿದ್ದರೆ, ಫುಟ್ಬಾಲ್ ಆಟದಿಂದ ಮಾತ್ರವಲ್ಲದೆ ಅಡಿಡಾಸ್, ಗಿಟೊರಾಡೆ, ಪೆಪ್ಸಿ, ಹವಾಯ್ ಕಂಪನಿಗಳ ಬ್ರಾಂಡ್‍ಅಂಬಾಸೆಡರ್ ಆಗಿರುವ ರೊನಾಲ್ಡ್ ಆ ಮೂಲಗಳಿಂದ ವರಮಾನ ಗಳಿಸುತ್ತಿದ್ದು ತಮ್ಮ ವಾರ್ಷಿಕ ಆದಾಯನ್ನು 108 ಮಿಲಿಯನ್ ಡಾಲರ್‍ಗಳ ಮೂಲಕ ಮೇವೆದರ್ ಹಾಗೂ ಮಿಸ್ಸಿಯ ನಂತರದ ಸ್ಥಾನದಲ್ಲಿದ್ದಾರೆ.

ಇನ್ನುಳಿದಂತೆ ಅಮೆರಿಕಾದ ಬ್ಯಾಸ್ಕೆಟ್‍ಬಾಲ್ ಆಟಗಾರ ಲಿಬ್ರೋನ್ ಜೇಮ್ಸ್ (6), ಟೆನ್ನಿಸ್ ತಾರೆಗಳಾದ ರೋಜರ್ ಫೆಡರರ್ (7), ರಫೆಲ್ ನಾಡಲ್ (20), ಗಲ್ಫ್ ಚಾಂಪಿಯನ್ಸ್‍ಗಳಾದ ಟೈಗರ್ ವುಡ್ಸ್ (16), ರೋಯ್ ಮಿಲ್‍ರೋಯ್ (26)ನೇ ಅತಿ ಹೆಚ್ಚು ಸಂಭಾವನೆ ಗಳಿಸಿದ ಅಥ್ಲೀಟ್‍ಗಳಾಗಿದ್ದಾರೆ. ಅತಿ ಹೆಚ್ಚು ಸಂಭಾವನೆ ಗಳಿಸಿದ 100 ಅಥ್ಲೀಟ್ಸ್‍ಗಳ ಪೈಕಿ 42 ಮಂದಿ ಬ್ಯಾಸ್ಕೆಟ್‍ಬಾಲ್ ಆಟಗಾರರಿದ್ದಾರೆ.

ಮಹಿಳಾ ಅಥ್ಲೀಟ್‍ಗಳಿಗೆ ಸ್ಥಾನವಿಲ್ಲ:
ಈ ಬಾರಿ ಫೆÇೀಬ್ರ್ಸ್ ಪ್ರಕಟಿಸಿರುವ ಅತಿ ಹೆಚ್ಚು ಸಂಭಾವನೆ ಗಳಿಸಿದ ಅಥ್ಲೀಟ್ಸ್‍ಗಳ ಸಾಲಿನಲ್ಲಿ ಯಾವೊಬ್ಬ ಮಹಿಳಾ ಅಥ್ಲೀಟ್‍ಗೂ ಸ್ಥಾನ ದೊರಕಿಲ್ಲ.ಕಳೆದ ಬಾರಿ 100 ರ ಸ್ಥಾನದಲ್ಲಿ ಗುರುತಿಸಿಕೊಂಡಿದ್ದ ಟೆನ್ನಿಸ್ ಲೋಕದ ತಾರೆ ವಿಲಿಯಮ್ಸ್ ಈ ಬಾರಿ 8 ಮಿಲಿಯನ್ ಡಾಲರ್‍ನಿಂದ 62,000 ಡಾಲರ್‍ಗೆ ಕುಸಿದಿದ್ದರೆ, ಲಿ ನಾ, ಮರಿಯಾ ಸರಪೋವಾ, ಸರಿನಾ ವಿಲಿಯಮ್ಸ್ ಅವರು ಕೂಡ ಈ ಪಟ್ಟಿಯಲ್ಲಿ ಗುರುತಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

Facebook Comments

Sri Raghav

Admin