ವಿರಾಟ್ ವಿಶ್ವಾಸ ಉಳಿಸಿಕೊಂಡ ಹರ್ಷಲ್

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ,ಏ.10-ಆರ್‍ಸಿಬಿ ನಾಯಕ ವಿರಾಟ್ ಕೋಹ್ಲಿ ಅವರವಿಶ್ವಾಸ ಉಳಿಸಿಕೊಳ್ಳುವಲ್ಲಿ ಬೌಲರ್ ಹರ್ಷಲ್ ಪಟೇಲ್ ಯಶಸ್ವಿಯಾಗಿದ್ದಾರೆ. ಡೆತ್ ಓವರ್‍ಗಳಲ್ಲಿ ಪಟೇಲ್ ಉತ್ತಮ ಪ್ರದರ್ಶನ ನೀಡಬಲ್ಲರು ಎಂದು ಮೊದಲೆ ಊಹಿಸಲಾಗಿತ್ತು. ನಿನ್ನೆ ನಡೆದ ಮುಂಬೈ ವಿರುದ್ಧದ ಪಂದ್ಯದ ಕೊನೆ ಓವರ್‍ನಲ್ಲಿ ಪಟೇಲ್ ಅವರು ಬೌಲಿಂಗ್ ಮಾಡಿದ ರೀತಿ ನಿರೀಕ್ಷೆ ಹುಸಿಯಾಗಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ.

ನಾನು ಯಾವಾಗಲು ತಮ್ಮ ತಂಡಕ್ಕಾಗಿ ಆಡಲು ಇಚ್ಚಿಸುತ್ತೇನೆ. ಡೆಲ್ಲಿ ಕ್ಯಾಪಿಟಲ್ ಪರ ಆಡುವಾಗಿ ಅ ತಂಡಕ್ಕಾಗಿ ಆಡುತ್ತಿದ್ದೆ. ಈಗ ಆರ್‍ಸಿಬಿ ತಂಡದ ಸದಸ್ಯನಾಗಿ ಉತ್ತಮ ಆಟವಾಡುತ್ತಿದ್ದೇನೆ ಎಂದು ಪಟೇಲ್ ಪ್ರತಿಕ್ರಿಯಿಸಿದ್ದಾರೆ.

ಡೆತ್ ಓವರ್‍ನಲ್ಲಿ ಪಟೇಲ್ ಅವರ ಬೌಲಿಂಗ್ ಅಮೋಘವಾಗಿತ್ತು. ಅವರ ನಿಖರ ಬೌಲಿಂಗ್ ದಾಳಿಯ ಸಾಮಥ್ರ್ಯ ತಿಳಿದಿದ್ದರಿಂದಲೆ ಅವರನ್ನು ನಮ್ಮ ತಂಡದ ಸದಸ್ಯರಾಗಿ ಆಯ್ಕೆ ಮಾಡಿಕೊಂಡಿದ್ದು ಕೋಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅತಿ ವೇಗವಾಗಿ ಬೌಲಿಂಗ್ ಮಾಡುವುದರ ಜತೆಗೆ ನಿಧಾನಗತಿಯ ಯಾರ್ಕರ್ ಹಾಕುವುದು ನನ್ನ ವಿಶೇಷ. ಮುಂಬೈ ವಿರುದ್ಧದ ಪಂದ್ಯದಲ್ಲಿ 18 ಹಾಗೂ 20 ನೆ ಓವರ್ ಮಾಡುವುದು ನಾನೇ ಎಂದು ಮೊದಲೆ ತೀರ್ಮಾನಿಸಿದ್ದರಿಂದ ನನಗೆ ಪ್ಲಾನ್ ಮಾಡಲು ಸಾಧ್ಯವಾಯಿತು. ಅದು ಯಶಸ್ವಿಯೂ ಆಯಿತು ಎನ್ನುವುದು ಪಟೇಲ್ ಅಭಿಪ್ರಾಯವಾಗಿದೆ.

Facebook Comments