ಅನಧಿಕೃತ ಫುಟ್‍ಪಾತ್ ತೆರವು

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ, ಜು.23- ನಗರದ ಸ್ವಚ್ಛತೆಗೆ ಹಾಗೂ ಸುಂದರವಾಗಿರಲು ಅನಧಿಕೃತ ಮತ್ತು ಫುಟ್‍ಪಾತ್ ಅಂಗಡಿಗಳನ್ನು ನಗರಸಭೆ ವತಿಯಿಂದ ತೆರವುಗೊಳಿಸುವ ಕಾರ್ಯಕ್ಕೆ ಇಂದು ನಗರದ ಹಳೆ ಬಸ್ ನಿಲ್ದಾಣದಿಂದ ಚಾಲನೆ ನೀಡಲಾಯಿತು. ತೆರವು ಕಾರ್ಯಕ್ರಮವು ನಗರ ಸ್ವಚ್ಛವಾಗುವವರೆಗೂ ನಡೆಯುತ್ತದೆ. ಹಳೆ ಬಸ್ ನಿಲ್ದಾಣದಲ್ಲಿ 130 ಮಳಿಗೆಗಳ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದೆ ಎಂದು ನಗರಸಭೆ ಆಯುಕ್ತ ಸತ್ಯನಾರಾಯಣ ರಾವ್ ಪತ್ರಿಕೆಗೆ ತಿಳಿಸಿದ್ದಾರೆ.

ಇತ್ತೀಚೆಗೆ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಸಾರ್ವಜನಿಕರೊಂದಿಗೆ ನಡೆದ ಸಭೆಯಲ್ಲಿ ನಗರದ ಸ್ವಚ್ಛತೆ ವಿರುದ್ಧ ಅನೇಕ ದೂರುಗಳು ಬಂದಿದ್ದು ಹಾಗೂ ಇತ್ತೀಚೆಗೆ ಜಿಲ್ಲಾ ರಕ್ಷಣಾ ಅಧಿಕಾರಿ ಕಾರ್ತಿಕ್‍ರೆಡ್ಡಿ ಅವರು ನಗರದಾದ್ಯಂತ ಸಂಚರಿಸಿ ಅಡ್ಡಿಯಾಗಿರುವ ಫುಟ್‍ಪಾತ್ ಮಳಿಗೆಗಳನ್ನು ಬೇರೆಡೆಗೆ ವರ್ಗಾಯಿಸಲು ಹಾಗೂ ಅನೇಕ ಸೂಚನೆಗಳನ್ನು ನೀಡಿದ್ದರಿಂದ ಇಂದು ಬೆಳಗ್ಗೆಯಿಂದಲೇ ತೆರವು ಕಾರ್ಯಕ್ರಮ ಆರಂಭಿಸಿದ್ದೇವೆ ಎಂದರು.

ಈ ಕಾರ್ಯಕ್ರಮ ನಗರದಾದ್ಯಂತ ನಡೆಯಲಿದೆ. ಹಳೆ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣದ ಭೂಪಟ ಸಿದ್ಧಗೊಂಡಿದ್ದು, ಡಿಪಿಆರ್ ಅನುಮೋದನೆಗೊಂಡು ಈಗಾಗಲೇ 1.6 ಕೋಟಿ ಹಣ ಬಿಡುಗಡೆಯಾಗಿದೆ ಎಂದು ಆಯುಕ್ತ ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.

ಡಿವೈಎಸ್‍ಪಿ ಚೌಡಪ್ಪ, ಸಿಪಿಐ ಫಾರೂಕ್ ಪಾಷ, ಪಿಎಸ್‍ಐ ಅಣ್ಣಯ್ಯ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ನಗರಸಭೆಯ ಜೆಸಿಬಿ ಹಾಗೂ 60 ಸಿಬ್ಬಂದಿಗಳು ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Facebook Comments