ದೇವಾಲಯಕ್ಕೆ ನುಗ್ಗಿ ರಂಪಾಟ ಮಾಡಿದ ಮೆಂಟಲ್

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ, ಫೆ.2- ದೇವಾಲಯಕ್ಕೆ ನುಗ್ಗಿ ರಂಪಾಟ ಮಾಡಿ ಸಾರ್ವಜನಿಕರ ನಿದ್ದೆಗೆಡಿಸಿದ್ದ ಮಾನಸಿಕ ಅಸ್ವಸ್ಥನನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನಿನ್ನೆ ರಾತ್ರಿ ಕುರುಬರ ಪೇಟೆಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯಕ್ಕೆ ಮಾನಸಿಕ ಅಸ್ವಸ್ಥ ಮಿಲತ್ ನಗರದ ಸಿಕಂದರ್ ಬೇಗ್ (38) ನುಗ್ಗಿ ಜೈ ಶ್ರೀರಾಂ ಎಂದು ಕೂಗಲಾರಂಭಿಸಿದ.

ನಂತರ ಗರ್ಭ ಗುಡಿಯೊಳಗೆ ಸೇರಿಕೊಂಡು ಕತ್ತನ್ನು ಕತ್ತರಿಸಿ ದೇವರ ಮುಂದೆ ಇಡುತ್ತೇನೆ ಎಂದು ಹನುಮಂತನಿಗೆ ಜೈಕಾರ ಹಾಡುತ್ತಿದ್ದ.ಸ್ಥಳೀಯರು ಧಾವಿಸಿ ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ವಿಷಯ ತಿಳಿದು ಜನ ಜಾತ್ರೆ ನೆರೆಯಿತು.

ಆತ ಬಂದಿದ್ದ ಮೋಟಾರ್ ಬೈಕ್ ಅನ್ನು ಜನ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಮಾನಸಿಕನಂತೆ ಈತ ನಾಟಕವಾಡುತ್ತಿದ್ದಾನೆ. ಅವನು ಚೆನ್ನಾಗಿಯೇ ಇದ್ದಾನೆ. ಮೊದಲು ಹೊರಗೆ ಹಾಕಿ ಬಂಧಿಸಿ ಎಂದು ಪೊಲೀಸರನ್ನು ಒತ್ತಾಯಿಸಿದರು. ಪೊಲೀಸರು ಹರಸಾಹಸಪಟ್ಟು ಆತನನ್ನು ಹೊರ ತಂದು ಕರೆದೊಯ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

Facebook Comments