ಯಾವ ಶಾಸಕರೂ ಕಾಂಗ್ರೆಸ್ ಬಿಟ್ಟು ಹೋಗುತ್ತಿಲ್ಲ : ಕೆ.ಎಚ್.ಮುನಿಯಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

kh muniyappaಬೆಂಗಳೂರು, ಜ.16-ಎರಡನೇ ಹಂತದ ಸಂಪುಟ ಪುನರ್‍ರಚನೆಯಲ್ಲಿ ಎರಡನೇ ಹಂತದ ನಾಯಕರಿಗೆ ಅವಕಾಶ ಸಿಗುತ್ತದೆ. ಹೀಗಾಗಿ ಯಾವ ಶಾಸಕರೂ ಕಾಂಗ್ರೆಸ್ ಬಿಟ್ಟು ಹೋಗುತ್ತಿಲ್ಲ ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.

ಕುಮಾರಕೃಪಾ ಅತಿಥಿಗೃಹದಲ್ಲಿಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್‍ನ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಬಿಜೆಪಿಗೆ ಸಂಪೂರ್ಣ ಜನಾದೇಶ ಸಿಕ್ಕಿಲ್ಲ. ಕಾಂಗ್ರೆಸ್-ಜೆಡಿಎಸ್‍ಗೆ ಹೆಚ್ಚು ಮಂದಿ ವೋಟು ಹಾಕಿದ್ದು, ಆಡಳಿತ ನಡೆಸಲು ಸ್ಪಷ್ಟ ಬಹುಮತ ಇದೆ. ಹೀಗಾಗಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಏಕಕಾಲಕ್ಕೆ ಎಲ್ಲರಿಗೂ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ. ಹಾಗಾಗಿಯೇ ಹಂತ ಹಂತವಾಗಿ ಸಂಪುಟ ಪುನರ್‍ರಚನೆಗೊಳ್ಳುತ್ತದೆ. ಈಗಿರುವ ಸಚಿವರು ಎರಡೂವರೆ ವರ್ಷ ಕೆಲಸ ಮಾಡುತ್ತಾರೆ. ಅನಂತರ ಹೊಸಬರಿಗೆ ಅವಕಾಶ ನೀಡಲಾಗುತ್ತದೆ. ಯಾರೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

ಮುಳಬಾಗಿಲು ಕ್ಷೇತ್ರದ ಶಾಸಕ ನಾಗೇಶ್ ಅವರು ಕಾಂಗ್ರೆಸ್‍ನ ಬೆಂಬಲ ಪಡೆದು ಚುನಾಯಿತರಾಗಿದ್ದಾರೆ. ಅವರು ಪಕ್ಷೇತರ ಶಾಸಕರಲ್ಲ ಹೀಗಾಗಿ ಅವರು ಮರಳಿ ಕಾಂಗ್ರೆಸ್ ಜತೆಗೆ ಬರಬೇಕು. ಅವರನ್ನು ನಾನು ಎರಡು ಬಾರಿ ಕೆ.ಸಿ.ವೇಣುಗೋಪಾಲ್ ಅವರ ಬಳಿ ಕರೆದುಕೊಂಡು ಹೋಗಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಒತ್ತಡ ಹೇರಿದ್ದೆ. ವೇಣುಗೋಪಾಲ್ ಅವರು ಕೂಡ ಅದಕ್ಕೆ ಒಪ್ಪಿದ್ದರು ಎಂದು ಹೇಳಿದರು.

Facebook Comments