ಕ್ಷೇತ್ರ ಶಿಕ್ಷಣಾಧಿಕಾರಿ ಎಸಿಬಿ ಬಲೆಗೆ

ಈ ಸುದ್ದಿಯನ್ನು ಶೇರ್ ಮಾಡಿ

ACBಕೆಜಿಎಫ್, ನ.4-ಕಚೇರಿಯಲ್ಲಿ ಬಾಕಿ ಇದ್ದ ಕಡತವನ್ನು ವಿಲೇವಾರಿ ಮಾಡಲು ಹತ್ತು ಸಾವಿರ ರೂಪಾಯಿ ಲಂಚ ಬೇಡಿಕೆ ಇಟ್ಟು, ನಂತರ ಅದನ್ನು ಪಡೆಯುವ ಸಂದರ್ಭದಲ್ಲಿ ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಅವರನ್ನು ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೊಪ್ಪನಹಳ್ಳಿಯ ಅಕ್ಷರ ಇಂಟರ್‍ನ್ಯಾಷನಲ್ ಶಾಲೆಯ ನವೀಕರಣಕ್ಕಾಗಿ ಶಾಲೆಯ ಆಡಳಿತ ಮಂಡಳಿಯ ಮಲ್ಲಿಕಾರ್ಜುನ ರೆಡ್ಡಿ ಕಡತವನ್ನು ಕಚೇರಿಗೆ ನೀಡಿದ್ದರು. ನವೀಕರಣಕ್ಕಾಗಿ ಲಂಚ ಕೇಳಿ ಪೀಡಿಸುತ್ತಿದ್ದ ಸುರೇಶ್ ಹತ್ತು ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಜೂನ್ 3 ರಂದು ನೀಡಿದ್ದ ಕಡತಕ್ಕೆ ಕಚೇರಿಯ ಸಿಬ್ಬಂದಿ ಪೀಡಿಸುತ್ತಿರುವುದರಿಂದ ಬೇಸತ್ತ ಮಲ್ಲಿಕಾರ್ಜುನ ರೆಡ್ಡಿ ಎಸಿಬಿ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಎಸಿಬಿ ಪೊಲೀಸರು ಕಚೇರಿಯ ವೇಳೆಯಲ್ಲಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಸುರೇಶ್ ಅವರನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸ್ಪಿ ಎ.ಆರ್.ಬಡಿಗೇರ ಮತ್ತು ಇನ್ಸ್‍ಪೆಕ್ಟರ್ ಪ್ರಕಾಶ್ ಹಾಜರಿದ್ದರು.

Facebook Comments