ಜೆಡಿಎಸ್‍ನ ಯಾವ ಶಾಸಕರೂ ಪಕ್ಷ ತೊರೆಯುವ ಅವಶ್ಯಕತೆ ಇಲ್ಲ : ಕೋನರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.13-ಜೆಡಿಎಸ್‍ನ ಯಾವ ಶಾಸಕರೂ ಪಕ್ಷ ತೊರೆಯುವ ಅವಶ್ಯಕತೆ ಇಲ್ಲ ಎಂದು ಮಾಜಿ ಶಾಸಕ ಕೋನರೆಡ್ಡಿ ತಿಳಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷ ಹಾಗೂ ನಾಯಕರಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರಬಹುದು. ಅವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಗೆಹರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರಿಗೂ ಸದ್ಯಕ್ಕೆ ಬೇರೆ ಶಾಸಕರ ಅಗತ್ಯವಿಲ್ಲ. ಅವರಲ್ಲೇ ಸಚಿವ ಸ್ಥಾನಕ್ಕೆ ಪೈಪೋಟಿ ಇದೆ ಎಂದರು. ಮುಖ್ಯಮಂತ್ರಿಯಾಗಿದ್ದಾಗ ಜಗದೀಶ್ ಶೆಟ್ಟರ್ ಅವರು, ಮಂತ್ರಿಯಾಗಿರುವುದು ಸರಿಯಲ್ಲ. ಅವರು ಪಕ್ಷದ ಅಧ್ಯಕ್ಷರಾಗಬೇಕಿತ್ತು ಎಂದು ಹೇಳಿದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಲು ಸಹಕಾರ ನೀಡಿದ್ದಕ್ಕೆ ಮಹಾರಾಷ್ಟ್ರದ ಸಿಎಂಗೆ ಅಭಿನಂದನೆ ಸಲ್ಲಿಸಲು ಮುಖ್ಯಮಂತ್ರಿ ಹೋಗಿದ್ದರು ಎಂದು ಆರೋಪಿಸಿದರು. ರಾಜ್ಯದ ಪ್ರವಾಹಪೀಡಿತ ಪ್ರದೇಶಗಳ ಜನರಿಗೆ ಸರಿಯಾಗಿ ಪರಿಹಾರ ಕಾರ್ಯಕೈಗೊಂಡಿಲ್ಲ. ಕೇಂದ್ರ ಸರ್ಕಾರದಿಂದಲೂ ನಿರೀಕ್ಷಿತ ಅನುದಾನ ಬರುತ್ತಿಲ್ಲ.

ಹೀಗಾಗಿ ರಜ್ಯ ಸರ್ಕಾರ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಬೇಕು ಎಂದು ಒತ್ತಾಯಿಸಿದರು. ಪ್ರವಾಹಪೀಡಿತ ಪ್ರದೇಶಗಳಿಗೆ ನೆರವು ನೀಡುವಂತೆ ಪ್ರಧಾನಿಯವರನ್ನು ಕೇಳುವ ಧೈರ್ಯ ಇಲ್ಲದಿದ್ದರೆ ಪ್ರತಿಪಕ್ಷದವರಾದ ನಾವು ಕೇಳುತ್ತೇವೆ ಎಂದು ಟೀಕಿಸಿದರು.

Facebook Comments