ಕೊಪ್ಪಳದಲ್ಲಿ ಚಿನ್ನದ ನಿಕ್ಷೇಪ ಪತ್ತೆ…!

ಈ ಸುದ್ದಿಯನ್ನು ಶೇರ್ ಮಾಡಿ

ಕೊಪ್ಪಳ,ಅ.14- ಜಿಲ್ಲಾಯ ಕುಷ್ಟಗಿ ತಾಲೂಕಿನ ತಾವರಗೆರೆ ಬಳಿಯ ನಾರಿನಾಳ ಗ್ರಾಮದ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ.
ಕಳೆದ ಮೂರು ದಿನಗಳಿಂದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ(ಸಿಎಸ್‍ಐ) ವಿಜ್ಞಾನಿಗಳ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ.

ನಾರಿನಾಳ ಬಳಿಯ ಜಮೀನಿನಲ್ಲಿ 113 ಅಡಿ ಆಳದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. 2017ರಲ್ಲಿ ಇಲ್ಲಿನ ಭಾಗದ ಮ್ಯಾದರಡೊಕ್ಕಿಯಲ್ಲಿ ಕಬ್ಬಿಣದ ಅದಿರು ಪತ್ತೆಯಾಗಿತ್ತು. ನಾರಿನಾಳ ಬಳಿಯ ಚಿನ್ನ ನಿಕ್ಷೇಪ ಕುರಿತು ಇನ್ನಷ್ಟು ಅಧ್ಯಯನ ನಡೆಸಲಿದ್ದು, ವಿಜ್ಞಾನಿಗಳ ತಂಡ ಬೀಡುಬಿಟ್ಟಿದೆ.

Facebook Comments