ಕೋಟಿಗೊಬ್ಬ-3 ರಿಲೀಸ್ ಕುರಿತು ಸ್ಪಷ್ಟನೆ ಕೊಟ್ಟ ನಿರ್ಮಾಪಕ ಸೂರಪ್ಪ ಬಾಬು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.14- ಲಾಕ್‍ಡೌನ್ ಬಳಿಕ ಚಿತ್ರಮಂದಿರಗಳಿಗೆ ಇಂದು ಪ್ರೇಕ್ಷಕರ ದಂಡು ಹರಿದು ಬಂದು ಹೌಸ್‍ಫುಲ್ ಬೊರ್ಡ್‍ಗಳು ಕಾಣಿಸಿಕೊಂಡಿದೆ. ಆದರೆ, ಭಾರಿ ನಿರೀಕ್ಷೆ ಮೂಡಿಸಿದ್ದ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರ ಆರಂಭದಲ್ಲಿ ವಿಘ್ನ ಅನುಭವಿಸಿದೆ. ಇಂದು ಬೆಳಗ್ಗೆ 7 ಗಂಟೆಯ ಪ್ರದರ್ಶನಕ್ಕೆ ಆಗಮಿಸಿದ್ದ ಪ್ರೇಕ್ಷಕರು ಚಿತ್ರ ವೀಕ್ಷಣೆಗೆ ಅವಕಾಶಸಿಗದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

( ರಿಲೀಸ್ ಆಗದ ಕೋಟಿಗೊಬ್ಬ-3 ಚಿತ್ರ, ಅಭಿಮಾನಿಗಳ ಆಕ್ರೋಶ..! )

ಬಿಗ್‍ಬಜೆಟ್ ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಚಿತ್ರ ಪ್ರೇಮಿಗಳಿಗೆ ಉತ್ಸಾಹ ಇಮ್ಮಡಿಕೊಂಡಿದ್ದು, ಒಂದೆಡೆ ಸುದೀಪ್ ಅಭಿಮಾನಿಗಳಿಗೆ ನಿರಾಸೆಯಾದರೆ ಅತ್ತ ಸಲಗ ಚಿತ್ರ ಭರ್ಜರಿ ಪ್ರದರ್ಶನ ಕಂಡು ಪ್ರೇಕ್ಷಕರ ಮನಗೆದ್ದಿದೆ.

ಆನ್‍ಲೈನ್‍ನಲ್ಲಿ ನಿನ್ನೆಯೇ ಟಿಕೆಟ್‍ಗಳನ್ನು ಪಡೆದು ಇಂದು ಕೋಟಿಗೊಬ್ಬ-3 ನೋಡಲು ಬಂದಿದ್ದೆವು. ಆದರೆ, ಥಿಯೇಟರ್ ಒಳಗೆ ನಮ್ಮನ್ನು ಬಿಡುತ್ತಿಲ್ಲ. ಕಾರಣ ಕೇಳಿದರೆ ತಾಂತ್ರಿಕ ಸಮಸ್ಯೆಯಾಗಿದೆ ಎಂದು ಹೇಳುತ್ತಾರೆ. ಗೊಂದಲ ಸೃಷ್ಟಿಯಾಗಿದೆ ಎಮದು ಕೆಲ ಅಬಿಮಾನಿಗಳು ರೊಚ್ಚಿಗೆದ್ದ ಘಟನೆ ಗಾಂನಗರದಲ್ಲಿ ನಡೆದಿದೆ.

7 ಗಂಟೆ ಪ್ರದರ್ಶನ ರದ್ದಾದ ನಂತರ 10.30ರ ಪ್ರದರ್ಶನ ಆರಂಭಗೊಳ್ಳುತ್ತದೆ ಎಂದು ಸಮಜಾಯಿಸಿ ನೀಡಲಾಗಿತ್ತು. ಆದರೆ, 11 ಗಂಟೆಯಾದರೂ ಟಿಕೆಟ್ ನೀಡದ ಕಾರಣ ನಿರಾಶೆಯಿಂದಲೇ ಪ್ರೇಕ್ಷಕರು ಥಿಯೇಟರ್ ಆವರಣದಿಂದ ಹೊರನಡೆದರು. ಕೊನೆಗೆ ಇಂದಿನ ಪ್ರದರ್ಶನ ರದ್ದಾಗಿದೆ ಎಂದು ಅಕೃತವಾಗಿ ತಿಳಿಸಿದ ನಂತರ ಕೆಲವೆಡೆ ಪ್ರತಿಭಟನೆಗಳು ನಡೆದಿವೆ. ಆದರೆ, ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಇದೆಲ್ಲದರ ನಡುವೆ ಎಚ್ಚೆತ್ತ ನಿರ್ಮಾಪಕ ಸೂರಪ್ಪಬಾಬು ಅವರು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದು, ಕೆಲವು ಸಮಸ್ಯೆಯಿಂದಾಗಿ ಚಿತ್ರ ಪ್ರದರ್ಶನಗೊಳ್ಳುತ್ತಿಲ್ಲ. ನಾಳೆ ರಿಲೀಜ್ ಆಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅತ್ತ ಸುದೀಪ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಇಂದಿನ ಪ್ರದರ್ಶನ ರದ್ದಾಗಿರುವ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಅಭಿಮಾನಿಗಳು ಶಾಂತರೀತಿಯಲ್ಲಿ ವರ್ತಿಸಿ. ಥಿಯೇಟರ್‍ಗಳಿಗೆ ಹಾನಿ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

Facebook Comments