ಗಾಂಧೀಜಿ ಭೋದಿಸಿದ ಶಾಂತಿ-ಅಹಿಂಸೆ-ಆದರ್ಶವನ್ನು ಜನರು ಪಾಲಿಸಬೇಕು : ರಾಷ್ಟ್ರಪತಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.30 (ಪಿಟಿಐ)- ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಮಹಾತ್ಮ ಗಾಂಧೀಜಿ ಅವರು ಅಳವಡಿಸಿಕೊಂಡಿದ್ದ ಶಾಂತಿ, ಅಹಿಂಸೆ, ಸರಳತೆ, ಸಾಧನಗಳ ಪರಿಶುದ್ಧತೆ ಮತ್ತು ನಮ್ರತೆಯ ಆದರ್ಶಗಳಿಗೆ ಜನತೆ ಬದ್ಧರಾಗಿರಬೇಕೆಂದು ರಾಷ್ಟ್ರಪಿತ ಮಹಾತ್ಮ ಗಾಂದಿಯವರ ಮರಣೋತ್ತರ ದಿನದಂದು ಸಂದೇಶ ನೀಡಿದರು.

ಹುತಾತ್ಮರ ದಿನದ ಅಂಗವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಿ ಮಾತನಾಡಿದರು. ಇಂದಿನ ದಿನ 1948ರಲ್ಲಿ ಗಾಂಧೀಜಿಯವರು ಮರಣಹೊಂದಿದರು. ದೇಶದ ಪರವಾಗಿ ಈ ದಿನ ಹುತಾತ್ಮ ದಿನವೆಂದು ಆಚರಿಸಲಾಗುತ್ತದೆ. ಇಂದು ಮಹಾತ್ಮರಿಗೆ ವಿನಮ್ರತೆಯಿಂದ ಗೌರವ ಸಲ್ಲಿಸುತ್ತೇನೆ.

ಅವರ ಹಾಕಿಕೊಟ್ಟ ಸತ್ಯ ಮತ್ತು ಪ್ರೀತಿಯ ಮಾರ್ಗವನ್ನು ಅನುಸರಿಸಲು ನಾವು ನಿರ್ಧರಿಸೋಣ ಎಂದು ಕೋವಿಂದ್ ಅವರು ಟ್ವೀಟ್ ಮಾಡಿದ್ದಾರೆ.

Facebook Comments