ನೇಪಾಳದ ಪ್ರಧಾನಿಯಾಗಿ ಮತ್ತೆ ಓಲಿಗೆ ಒಲಿದ ಯೋಗ

ಈ ಸುದ್ದಿಯನ್ನು ಶೇರ್ ಮಾಡಿ

ಕಠ್ಮಂಡು,ಮೇ.14-ನೇಪಾಳದ ಪ್ರಧಾನ ಮಂತ್ರಿಯಾಗಿ ಕೆ.ಪಿ.ಶರ್ಮಾ ಓಲಿ ಮತ್ತೆ ನಿಯೋಜನೆಗೊಂಡಿದ್ದಾರೆ. ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದ ಪ್ರತಿಪಕ್ಷಗಳು ಸಂಸತ್ತಿನಲ್ಲಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ನೇಪಾಳ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ಮತ್ತೊಮ್ಮೆ ಓಲಿ ಅವರನ್ನೆ ಪ್ರದಾನಿಯಾಗಿ ಮುಂದುವರೆಯಲು ಅನುಮತಿ ನೀಡಿದ್ದಾರೆ.

ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಮೈತ್ರಿಪಕ್ಷಗಳು ಹಿಂಪಡೆದ ಹಿನ್ನಲೆಯಲ್ಲಿ ಓಲಿ ಕುರ್ಚಿ ಅಲುಗಾಡುವಂತಾಗಿತ್ತು. ಹೀಗಾಗಿ ವಿಶ್ವಾಸ ಮತ ಯಾಚನೆಗೆ ನಡೆದ ವಿಶೇಷ ಅಧಿವೇಶನದಲ್ಲಿ ಓಲಿ ಅವರು ವಿಶ್ವಾಸ ಗೆಲ್ಲುವಲ್ಲಿ ವಿಫಲರಾಗಿ ರಾಜೀನಾಮೆ ನೀಡಿದ್ದರು.

ಓಲಿ ರಾಜೀನಾಮೆ ನಂತರ ಪ್ರತಿಪಕ್ಷಗಳಿಗೆ ಸರ್ಕಾರ ರಚಿಸಲು ಆಹ್ವಾನಿಸಿದ ಬಂಡಾರಿ ಅವರು ವಿಶ್ವಾಸ ಮತ ಸಾಬೀತುಪಡಿಸುವಂತೆ ಸೂಚನೆ ನೀಡಿದ್ದರು. ಆದರೆ, ಪ್ರತಿಪಕ್ಷಗಳು ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲ ಕ್ರೋಢಿಕರಿಸಲು ಸಾಧ್ಯವಾಗದೆ ಕೈ ಚೆಲ್ಲಿರುವ ಹಿನ್ನಲೆಯಲ್ಲಿ ಮತ್ತೆ ಓಲಿ ಅವರಿಗೆ ಪ್ರಧಾನಿ ಪಟ್ಟ ಹುಡುಕಿಕೊಂಡು ಬಂದಿದೆ.

ಇಂದು ಮಧ್ಯಾಹ್ನ ಸಂಸತ್ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಓಲಿ ಅವರು ನೇಪಾಳ ಪ್ರಧಾನಮಂತ್ರಿಯಾಗಿ ಮೂರನೆ ಭಾರಿಗೆ ಅಧಿಕಾರ ಸ್ವೀಕರಿಸಿದ್ದಾರೆ.

Facebook Comments

Sri Raghav

Admin