ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಎಸ್.ಎಸ್.ಪ್ರಕಾಶಂ ಮುಂದುವರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.8-ಕೆಪಿಸಿಸಿ ಕಾರ್ಮಿಕ ಘಟಕಕ್ಕೆ ಎಸ್.ಎಸ್. ಪ್ರಕಾಶಂ ಅವರನ್ನು ಅಧ್ಯಕ್ಷರನ್ನಾಗಿ ಮುಂದುವರೆಸಲಾಗಿದ್ದು, ಜೊತೆಗೆ ಒಟ್ಟು 30 ಜನರ ಸಮಿತಿಯನ್ನು ಪುನರ್ ರಚಿಸಲಾಗಿದೆ. ಗೌರವಾಧ್ಯಕ್ಷರಾಗಿ ಶಾಂತ ಕುಮಾರ್, ಉಪಾಧ್ಯಕ್ಷರಾಗಿ ರಾಕೇಶ್ ಮಲ್ಲಿ, ಮುತ್ತಪ್ಪ ಮುದ್ದಯ್ಯ, ಬೋರೆಶೆಟ್ಟಿ, ಲಕ್ಷ್ಮಿವೆಂಕಟೇಶ್, ದೊರೈ ಆಯ್ಕೆಯಾಗಿದ್ದಾರೆ.
ಪ್ರಧಾನಕಾರ್ಯದರ್ಶಿಗಳಾಗಿ ಡಿ.ಲೀಲಾಕೃಷ್ಣ, ವಿ.ವೆಂಕಟೇಶ್, ಸದಾಶಿವಶೆಟ್ಟಿ(ಮಂಗಳೂರು) ಅವರನ್ನು ನೇಮಿಸಲಾಗಿದೆ.

ಸಂಘಟನಾ ಕಾರ್ಯದರ್ಶಿಗಳಾಗಿ ಪಾರ್ಥಿಬನ್(ಕೆಜಿಎಫ್), ಸತೀಶ್‍ಕುಮಾರ್ (ಮೈಕೋ), ಲಕ್ಷ್ಮೀಕಾಂತ್(ಎಸ್‍ಇಜಿ), ಸುರೇಶ್(ಬಿಇಎಲ್), ಆನಂದ್ (ಬಿಎಚ್‍ಇಎಲ್), ಕಿಶೋರ್‍ಶೆಟ್ಟಿ (ಹುಬ್ಬಳ್ಳಿ), ನಾಗರಾಜ್ (ಮೈಸೂರು), ಮಲ್ಲಯ್ಯ ಸಾಲಿಮಠ (ಭಾಷ್),ಧನಪಾಲ್, ಬಾಬುಪೂಜಾರ್ (ಕೆಎಸ್‍ಟಿಡಿಸಿ), ಗುಂಡಯ್ಯ (ಕೆಎಸ್‍ಡಿಎಲ್), ಉಮೇಶ್ ಎಂ.ಕೆ.,

ಲಕ್ಷ್ಮಣ್ (ಆರ್‍ಡಬ್ಲ್ಯುಎಫ್), ಸಂತೋಷ್ ಕುಮಾರ್ (ಇಎಸ್‍ಐಸಿ ಗುಲ್ಗರ್ಗಾ), ಸೆಂಥಿಲ್‍ಕುಮಾರ್(ಇಎಸ್‍ಐಸಿ ಬೆಂಗಳೂರು), ಹನುಮಂತಯ್ಯ (ತುಮಕೂರು), ರವಿ (ಮೈಸೂರು), ನಟರಾಜ್ (ಪಿಎಫ್), ಪುಷ್ಪರಾಜ್, ನರಸಿಂಹಮೂರ್ತಿ ಅವರುಗಳನ್ನು ನೇಮಿಸಲಾಗಿದೆ.

ಅಲ್ಲದೆ 15 ಮಂದಿ ಕಾರ್ಯದರ್ಶಿಗಳು ಮತ್ತು ಒಬ್ಬ ಖಜಾಂಚಿ ಹಾಗೂ 12 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಐಎನ್‍ಟಿಯುಸಿ ಅಧ್ಯಕ್ಷ ಡಾ.ಸಂಜೀವ್‍ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments