ಎಫ್‌ಡಿಎ ಪರೀಕ್ಷೆಗೆ ಹೊಸ ದಿನಾಂಕ ನಿಗದಿಪಡಿಸಿದ ಕೆಪಿಎಸ್‌ಸಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.2- ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮುಂದೂಡಲಾಗಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‍ಡಿಎ) ಹುದ್ದೆಯ ಪರೀಕ್ಷೆಯನ್ನು ಇದೇ 28ಕ್ಕೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ತೀರ್ಮಾನಿಸಿದೆ.

ಕೆಪಿಎಸ್‍ಸಿ ಕಚೇರಿಯಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಪರೀಕ್ಷೆಯನ್ನು ಫೆ.28ಕ್ಕೆ ನಡೆಸಲು ಆಯೋಗ ತೀರ್ಮಾನಿಸಿದೆ.

ಜ.24ಕ್ಕೆ ಎಫ್‍ಡಿಎ ಪರೀಕ್ಷೆ ನಿಗದಿಯಾಗಿತ್ತು. ಪರೀಕ್ಷೆಯ ಹಿಂದಿನ ದಿನವೇ ಪ್ರಶ್ನೆ ಪತ್ರಿಕೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ದಿಢೀರ್ ಮುಂದೂಡಲಾಗಿತ್ತು.

Facebook Comments

Sri Raghav

Admin