ಕೆಪಿಎಸ್‍ಸಿ ಹುದ್ದೆಗಳಿಗೆ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.22- ನಗರ ಸ್ದಳೀಯ ಸಂಸ್ಥೆಗಳಿಗೆ ಕೊರತೆ ಇರುವ ಸಿಬ್ಬಂದಿ ಭರ್ತಿ ಮಾಡಲು ಕೆಪಿಎಸ್‍ಸಿಯಿಂದ 561 ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಎಂದು ಪೌರಾಡಳಿ ಮತ್ತು ತೋಟಗಾರಿಕಾ ಸಚಿವ ನಾರಾಯಣಗೌಡ ಹೇಳಿದ್ದಾರೆ.

ವಿಧಾನ ಪರಿಷತ್‍ನಲ್ಲಿ ಆಡಳಿತ ಪಕ್ಷದ ಶಾಸಕ ರಘುನಾಥ್ ಮಲ್ಕಾಪುರೆ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಸ್ಥಳೀಯ ಅಗತ್ಯತೆಗಳನ್ನು ಆಧರಿಸಿ ಡಿ ಗ್ರೂಪ್ ನೌಕರರನ್ನು ನೇಮಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಬಾಕಿ ಉಳಿದಂತೆ ರಾಜಜ್ಯಾದ್ಯಂತ ಇರುವ ಖಾಲಿ ಹುದ್ದೆಗಳಿಗೆ ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳಲು ಕೆಪಿಎಸ್‍ಸಿಗೆ ಪತ್ರ ಬರೆಯಲಾಗಿದೆ ಎಂದರು.

ಕರ್ನಾಟಕ ಲೋಕಸೇವಾ ಆಯೋಗವನ್ನು ಕೆಪಿಎಸ್‍ಸಿ ಎಂದು ಉಚ್ಚರಿಸುವ ಬದಲು ಸಚಿವರು ಕೆಪಿಸಿಸಿ ಎಂದು ಬಾಯಿ ತಪ್ಪಿ ಹೇಳಿದರು. ಅದೇ ಅವಕಾಶ ಬಳಸಿಕೊಂಡ ಪ್ರತಿಪಕ್ಷದ ಸದಸ್ಯರು, ಸಚಿವರು ಮುಂದಿನ ದಿನಗಳಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಸೇರ್ಪಡೆಯಾಗುತ್ತಾರೆ. ಅದಕ್ಕಾಗಿ ನಮ್ಮ ಪಕ್ಷದ ಹೆಸರು ಉಚ್ಚರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

Facebook Comments