ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ : ಕೃಷ್ಣಬೈರೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಕೆಆರ್ ಪುರ, ಜು.28- ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ ಸಿಎಂ ಆಯ್ಕೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸದೇ ಮೋದಿ ಹಾಗೂ ಅಮಿತ ಶಾ ಸರ್ವಾಧಿಕಾರಿ ಧೋರಣೆ ಮಾಡಿದ್ದಾರೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಆರೋಪಿಸಿದರು. ಉದಯನಗರ ಬ್ಲಾಕ್‍ನ ಹೆಚ್‍ಎಎಲ್‍ನಲ್ಲಿ ಹಮ್ಮಿಕೊಂಡಿದ್ದ ಸಹಾಯ ಹಸ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎರಡು ವರ್ಷ ಜನಪರ ಆಡಳಿತ ಸಹ ನಡೆಸಿಲ್ಲ, ಕುರ್ಚಿ ಹಾಗೂ ಲೂಟಿ ಈ ಎರಡಕ್ಕಾಗಿ ಬಿಜೆಪಿ ಕಚ್ಚಾಡುತ್ತಿದೆ ಎಂದರು.

ಕೋವಿಡ್ ನಿಂದ ಎಷ್ಟು ಜನ ಸತ್ತಿದ್ದಾರೆ ಎಂದು ಸರ್ಕಾರ ಮುಚ್ಚಿಟ್ಟಿದೆ, ಕರ್ನಾಟಕದಲ್ಲಿ 30 ಸಾವಿರ ಜನ ಸತ್ತಿದ್ದಾರೆ ಅಂತಾರೆ ಆದರೆ ಲಕ್ಷಾಂತರ ಜನ ಸತ್ತಿದ್ದಾರೆ ಇದರ ಸತ್ಯ ಹೊರಗಡೆ ಬರಬೇಕಾಗಿದೆ ಎಂದು ಹೇಳಿದರು. ಇಂಟರ್ ನ್ಯಾಷನಲ್ ಎP್ಸï ಫರ್ಟ್ ಪ್ರಕಾರ 40 ಲಕ್ಷ ಜನ ಸತ್ತಿದ್ದಾರೆ ಆದರೆ ಕೇಂದ್ರ ಸರ್ಕಾರ ಹೇಳೋದು ನಾಲ್ಕು ಜನ ಮಾತ್ರ, ಕೋವಿಡ್‍ನಿಂದ ಸತ್ತಿದ್ರೆ ದಾಖಲಾತಿ ಸಂಗ್ರಹಿಸಿ, ಕೋವಿಡ್‍ನಿಂದ ಸತ್ತಿರೋರಿಗೆ ಎಷ್ಟೋ ಜನಕ್ಕೆ ಪ್ರಮಾಣ ಪತ್ರ ಇಲ್ಲ, ಸೋನಿಯಾ ಗಾಂಧಿ ಅವರ ಸೂಚನೆ ಮೇರೆಗೆ ಡಿಕೆಶಿ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೋವಿಡ್ ನಿಂದ ಸತ್ತೋರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಕಚ್ಚಾಟದಲ್ಲಿ ಮುಳುಗಿ ಹೋಗಿದೆ, ಫರ್ಸಂಟೇಜ್ ಪಡೆಯಲು ಕುರ್ಚಿಗಾಗಿ ಕಾದಾಡುತ್ತಿದ್ದಾರೆ ಎಂದು ಹೇಳಿದರು. ಪೆಟ್ರೋಲ, ಡೀಸಲ್ ಸೇರಿದಂತೆ ದಿನ ನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ ಇದರ ಬಗ್ಗೆ ಹೋರಾಟಗಳು ಮಾಡಬೇಕಿದೆ ಎಂದು ಹೇಳಿದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ, ವಿಧಾನಪರಿಷತ್ ಮುಖ್ಯ ಸಚೇತಕ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ಬ್ಲಾಕ್ ಅಧ್ಯಕ್ಷರಾದ ಪ್ರಸಾದ್ ರೆಡ್ಡಿ, ಮಂಜುನಾಥ್, ಮುಖಂಡರಾದ ಡಿ.ಕೆ.ಮೋಹನ್ ಬಾಬು, ವೆಂಕಟೇಶ, ಡಿ.ಎ.ಗೋಪಾಲï, ಉಮಾ ಮತ್ತಿತರರಿದ್ದರು

Facebook Comments