ಕೃಷ್ಣ ಜನ್ಮಾಷ್ಟಮಿ : ಕೊರೋನಾ ಮಧ್ಯೆಯೂ ಬಾಲಕೃಷ್ಣರ ಕಲರವ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.11-ಭಾರತದಲ್ಲಿ ಆಚರಿಸುವ ಅತ್ಯಂತ ವರ್ಣರಂಜಿತ ಮತ್ತು ವೈಶಿಷ್ಟ್ಯಪೂರ್ಣ ಹಬ್ಬಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯೂ ಒಂದಾಗಿದೆ. ಇದರ ಅಂಗವಾಗಿ ಇಂದು ನಾಡಿನಾದ್ಯಂತ ಶ್ರೀಕೃಷ್ಣನ ಭಕ್ತರು ಶ್ರದ್ಧಾಭಕ್ತಿಯಿಂದ ಹಬ್ಬ ಆಚರಿಸಿದರು.

ಗೋಕುಲಾ ಷ್ಟಮಿಯನ್ನು ಎರಡು ವಿಭಿನ್ನ ದಿನಗಳಲ್ಲಿ ಆಚರಿಸಲಾಗು ವುದು. ದುಷ್ಟರ ವಿರುದ್ಧ ಜಾಣ್ಮೆಯಿಂದ ಹೋರಾಡುವ ಕೃಷ್ಣ ಪ್ರತಿ ಯುಗದಲ್ಲೂ ಒಳ್ಳೆಯ ದಕ್ಕಾಗಿ ಜನ್ಮ ತಳೆದಿದ್ದಾನೆ ಎಂಬ ನಂಬಿಕೆ ನಮ್ಮಲ್ಲಿದೆ. ಶ್ರೀ ಕೃಷ್ಣ ವಿಷ್ಣುವಿನ 8ನೆ ಅವತಾರವೆಂದೂ ಹೇಳಲಾಗುತ್ತದೆ.

ಈ ಹಬ್ಬದಂದು ಅನುಯಾಯಿಗಳು ಉಪವಾಸ, ವ್ರತ ಆಚರಿಸಿ ಕೃಷ್ಣನನ್ನು ಸ್ಮರಿಸುತ್ತಾರೆ. ಇಂದೂ ಸಹ ರಾಜ್ಯದ ನಾನಾ ಕಡೆ ಅದರಲ್ಲೂ ಕೃಷ್ಣನ ದೇಗುಲಗಳಲ್ಲಿ ಹಬ್ಬವನ್ನು ಸಡಗರದಿಂದ ನಡೆಸಲಾಯಿತು.

ಉಡುಪಿ ಕೃಷ್ಣನಿಗೆ ವಿಶೇಷ ಪೂಜೆ ನೆರವೇರಿತು. ಅದರಂತೆ ನಗರದ ಪ್ರಸಿದ್ಧ ದೇಗುಲವಾದ ಇಸ್ಕಾನ್, ಮಹಾಲಕ್ಷ್ಮಿ ಲೇಔಟ್‍ಗಳಲ್ಲಿ ವಿಶೇಷ ಪೂಜೆಗಾಗಿ ವಿಶೇಷ ಅಲಂಕಾರ ಮಾಡಿ ಬೆಳಗಿನಿಂದಲೇ ಉಪವಾಸವಿದ್ದು, ಕೃಷ್ಣನ ಪೂಜೆ, ಜಪ ಮಾಡಲಾಯಿತು.

ಭಾರತದಲ್ಲಿ ಅತ್ಯಂತ ವರ್ಣರಂಜಿತ ಹಬ್ಬಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಒಂದಾಗಿದೆ.ಕೃಷ್ಣನ ಭಕ್ತರು ಶ್ರದ್ಧಾ-ಭಕ್ತಿಯಿಂದ ಮತ್ತು ವೈಭವದಿಂದ ಆಚರಿಸುವ ಈ ಹಬ್ಬದಲ್ಲಿ ಕೃಷ್ಣನನ್ನು ಸ್ಮರಿಸುವ ವಿಧಾನಗಳಲ್ಲಿ ಆತನ ಬಾಲಲೀಲೆಯನ್ನು ನೆನಪಿಸಿಕೊಳ್ಳುವುದೇ ವೈಶಿಷ್ಟಯ.

ಕಾರಣ ಇಂದು ದೇಶದ ಉದ್ದಗಲಕ್ಕೂ ಪುಟ್ಟ ಮಕ್ಕಳಿಗೆ ರಾಧಾ-ಕೃಷ್ಣರ ವೇಷಭೂಷಣ ಹಾಕಿ ಕೃಷ್ಣನ ಬಾಲ್ಯದ ಕ್ಷಣಗಳನ್ನು ಮೆಲುಕು ಹಾಕುವ ಸುದಿನ.

ಇಂದು ನಗರದಲ್ಲೂ ಪುಟ್ಟ ಮಕ್ಕಳಿಗೆ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಳ್ಳ ಕೃಷ್ಣ, ಮುದ್ದುಕೃಷ್ಣ, ಬೆಣ್ಣೆ ಕೃಷ್ಣ, ಕೊಳಲು ವಾದಕ ಕೃಷ್ಣನ ರೂಪದಲ್ಲಿ ಶೃಂಗರಿಸಿದ್ದರು.

Facebook Comments

Sri Raghav

Admin