ಕೆಆರ್‌ಎಸ್‌ ತುಂಬಿ ಹರಿದರೂ ಜೀವಜಲ ಕಾವೇರಿಗೆ ಬಾಗಿನ ಅರ್ಪಿಸಲು ಬಾರದ ಸಿಎಂ..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಆ. 25- ಕೃಷ್ಣರಾಜ ಸಾಗರ ತುಂಬಿದ್ದರೂ ನಾಡಿನ ಜೀವಜಲ ಕಾವೇರಿಗೆ ಬಾಗಿನ ಅರ್ಪಿಸುವ ಕಾಲ ಕೂಡಿ ಬಂದಿಲ್ಲ. ಪ್ರತಿವರ್ಷ ಕಾವೇರಿ ತುಂಬುತ್ತಿದ್ದಂತೆ ರಾಜ್ಯದ ಮುಖ್ಯಮಂತ್ರಿಯಾದವರು ಬಂದು ಬಾಗಿನ ಅರ್ಪಿಸುವ ಸಂಪ್ರದಾಯ ರೂಢಿಯಲ್ಲಿತ್ತು.

ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಆಗಿನಿಂದಲೂ ಕೆಆರ್‍ಎಸ್ ತುಂಬುತ್ತಿದ್ದಂತೆ ಮುಖ್ಯಮಂತ್ರಿಗಳು ಬಂದು ಬಾಗಿನ ಅರ್ಪಿಸುತ್ತಿದ್ದರು.

ಆದರೆ ಈ ಬಾರಿ ಕೆಆರ್‍ಎಸ್ ತುಂಬಿ ಹಲವು ದಿನಗಳೇ ಆಗಿದ್ದರೂ ಈಗಿನ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪನವರು ಈವರೆಗೂ ಬಂದು ಕಾವೇರಿಗೆ ಬಾಗಿನ ಅರ್ಪಿಸಿಲ್ಲ.

ಯಡಿಯೂರಪ್ಪನವರು ಅಧಿಕಾರ ವಹಿಸಿಕೊಂಡು ಒಂದು ತಿಂಗಳಾಗುತ್ತಾ ಬಂದಿದ್ದರೂ ಕೆಆರ್‍ಎಸ್ ತುಂಬಿಯು ಹಲವು ದಿನಗಳೇ ಕಳೆದಿದ್ದರೂ ಬಾಗಿನ ಸಮರ್ಪಣೆಗೆ ಸಿಎಂ ಬಾರದಿರುವುದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ವಿ.ಸೋಮಣ್ಣನವರನ್ನು ನೇಮಕ ಮಾಡಲಾಗಿದೆ. ಅವರು ಸಹ ಈ ಬಗ್ಗೆ ಗಮನ ಹರಿಸಿಲ್ಲ.

Facebook Comments