KRSನ ಬೃಂದಾವನದಲ್ಲಿ ಕುಸಿದ ಮೆಟ್ಟಿಲು..!

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ,ಜು.19-ಕೆಆರ್‍ಎಸ್ ಅಣೆಕಟ್ಟೆ ಸುರಕ್ಷತೆ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗಿದೆ. ಅಣೆಕಟ್ಟು ನಿರ್ಮಾಣವಾಗಿ 90 ವರ್ಷಗಳ ಬಳಿಕ ಅಣೆಕಟ್ಟೆ ಬಳಿ ಕಲ್ಲುಗಳು ಕುಸಿತವಾಗಿದ್ದು, ನೀರಾವರಿ ಇಲಾಖೆ ಅಧಿಕಾರಿಗಳು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಬೃಂದಾವನ ಉದ್ಯಾನವನದಿಂದ ಕೆಆರ್‍ಎಸ್ ಜಲಾಶಯದ ಮೇಲೆ ಹೋಗುವ ರಸ್ತೆಯಲ್ಲಿ ಕಲ್ಲುಗಳ ಕುಸಿತ ಕಂಡುಬಂದಿದೆ. ಡ್ಯಾಮ್‍ನ ಕಲ್ಲುಗಳ ಕುಸಿದಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚಾಗಿದೆ.

ಅಣೆಕಟ್ಟೆ ಸುರಕ್ಷತೆಗೆ ನಿರ್ಮಾಣ ಮಾಡಲಾಗಿದ್ದ ಗೋಡೆ ಕಲ್ಲುಗಳು ಕುಸಿದಿರುವುದು ಸಹಜವಾಗಿಯೇ ಆತಂಕಕ್ಕೀಡು ಮಾಡಿದೆ. 90 ವರ್ಷಗಳ ನಂತರ ಮೊದಲ ಬಾರಿಗೆ ಡ್ಯಾಂನ ಉದ್ಯಾನವನದ ಈ ಭಾಗದಲ್ಲಿ ಕಲ್ಲುಗಳ ಕುಸಿತವಾಗಿರುವುದು ಕಂಡುಬಂದಿರುವುದರಿಂದ ನೀರಾವರಿ ನಿಗಮದ ಅಧಿಕಾರಿಗಳು ದುರಸ್ತಿ ಕಾರ್ಯ ಮಾಡುತ್ತಿದ್ದಾರೆ.

ಕೆಆರ್‍ಎಸ್ ಬಿರುಕು ಬಿಟ್ಟಿದೆ ಎಂದು ಹೇಳುತ್ತಿರುವ ಸಮಯ ಹಾಗೂ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪಗಳ ಸಂದರ್ಭದಲ್ಲಿ ಅಣೆಕಟ್ಟೆಯ ಗೋಡೆಯ ಕಲ್ಲು ಕುಸಿದಿರುವುದು ಕಾಕತಾಳೀಯವಾಗಿದೆ.

Facebook Comments