ಕೆಆರ್‌ಎಸ್‌, ಕಬಿನಿ, ಹೇಮಾವತಿ ಜಲಾಶಯಗಳು ಭರ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.13-ಕಾವೇರಿ ಜಲಾನಯನ ಭಾಗದಲ್ಲಿ ಮಳೆ ಕಡಿಮೆಯಾಗಿದ್ದು, ಜಲಾಶಯಗಳ ಒಳಹರಿವು ಹಾಗೂ ಹೊರಹರಿವು ಗಣನೀಯವಾಗಿ ಕಡಿಮೆಯಾಗಿದೆ. ಪ್ರಮುಖ ಜಲಾಶಯಗಳಾದ ಕೆಆರ್‍ಎಸ್, ಹೇಮಾವತಿ, ಕಬಿನಿ, ಹಾರಂಗಿ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

ಇಂದು ಬೆಳಗಿನ ಅಧಿಕೃತ ಮಾಹಿತಿ ಪ್ರಕಾರ ಕೆಆರ್‍ಎಸ್ ಜಲಾಶಯದಲ್ಲಿ 123.70 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಗರಿಷ್ಟ ಸಾಮಥ್ರ್ಯ 124.80 ಅಡಿಗಳಷ್ಟಾಗಿದ್ದು, ಭರ್ತಿಯಾಗಲು ಕೇವಲ ಒಂದು ಅಡಿಗಳಷ್ಟು ಮಾತ್ರ ಬಾಕಿ ಇತ್ತು.

ಜಲಾಶಯಕ್ಕೆ ಒಳಹರಿವು 90,318ಕ್ಯೂಸೆಕ್‍ನಷ್ಟು ಇದ್ದು, ಸಂಜೆ ವೇಳೆಗೆ ಮತ್ತಷ್ಟು ಕಡಿಮೆ ಯಾಗುವ ಸಾಧ್ಯತೆಯಿದೆ. ಜಲಾಶಯ ದಿಂದ ಹೊರಬೀಡಲಾಗುತ್ತಿದ್ದ ನೀರಿನ ಪ್ರಮಾಣವನ್ನು 2,208ಕ್ಯೂಸೆಕ್‍ಗೆ ಮಿತಿಗೊಳಿಸ ಲಾಗಿದೆ.

ಹೇಮಾವತಿ ಜಲಾಶಯದಲ್ಲಿ 2,919.41ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, 2,922ಅಡಿಗಳ ಗರಿಷ್ಠ ಸಾಮಥ್ರ್ಯದ ಈ ಜಲಾಶಯದಲ್ಲಿ ಒಳಹರಿವು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು 56,289ಕ್ಯೂಸೆಕ್ ನಷ್ಟಿತ್ತು. ಹೀಗಾಗಿ ಹೊರಹರಿವನ್ನು 38,000ಕ್ಯೂಸೆಕ್‍ಗೆ ಇಳಿಸಲಾಗಿದೆ.

ಅದೇ ರೀತಿ ಹಾರಂಗಿ ಜಲಾಶಯ ದಲ್ಲಿ 2857.84 ಅಡಿಗಳಷ್ಟು ನೀರಿದ್ದು, 2.859ಅಡಿಗಳ ಗರಿಷ್ಟ ಸಾಮಥ್ರ್ಯದ ಈ ಜಲಾಶಯಕ್ಕೆ ಒಳಹರಿವು 8.746ಕ್ಯೂಸೆಕ್‍ನಷ್ಟಿತ್ತು. ಹೊರ ಹರಿವನ್ನು 2.609ಕ್ಯೂಸೆಕ್‍ಗೆ ನಷ್ಟಿತ್ತು. ಕಬಿನಿ ಜಲಾಶಯದ ಗರಿಷ್ಠ ಸಾಮಥ್ರ್ಯ 2284 ಅಡಿಗಳಾಗಿದ್ದು, ಇಂದು 2283.10ಅಡಿಗಳಿಗೆ ತಲುಪಿತ್ತು.

ಹೀಗಾಗಿ ಈ ಜಲಾಶಯವು ಬಹುತೇಕ ಭರ್ತಿಯಾದಂತಾಗಿದೆ. ಒಳ ಹರಿವು 39.973ಕ್ಯೂಸೆಕ್‍ನಷ್ಟಿದ್ದು, 23.292ಕ್ಯೂಸೆಕ್ ನಷ್ಟು ನೀರನ್ನು ಹೊರಬಿಡಲಾಗಿದೆ. ಕೊಡಗು, ಚಿಕ್ಕಮಗಳೂರು, ಹಾಸನ ಭಾಗದಲ್ಲಿ ಜಲಾಶಯಗಳ ಒಳಹರಿವು ಕಡಿಮೆಯಾಗಿದೆ.

ಭಾರೀ ಮಳೆಯಿಂದ ನದಿಗಳಲ್ಲಿ ಪ್ರವಾಹ ಉಂಟಾಗಿದ್ದರಿಂದ ಭಾರೀ ಪ್ರಮಾಣದ ನೀರನ್ನು ನದಿಗಳಿಗೆ ಬಿಡಲಾಗಿತ್ತು. ಈಗ ಒಳಹರಿವು ಕಡಿಮೆಯಾಗಿರುವುದರಿಂದ ಜಲಾಶಯಗಳನ್ನು ಭರ್ತಿ ಮಾಡುವ ಉದ್ದೇಶದಿಂದ ನೀರಿನ ಹೊರಹರಿವನ್ನು ಕಡಿಮೆ ಮಾಡಲಾಗಿದೆ. ನದಿಗಳಲ್ಲೂ ಕೂಡ ಪ್ರವಾಹ ಪರಿಸ್ಥಿತಿ ತಗ್ಗಿದೆ.

Facebook Comments