ಇತಿಹಾಸದಲ್ಲಿ ಮೊದಲ ಬಾರಿಗೆ ಕೆಆರ್‌ಎಸ್‌ ಜಲಾಶಯದಲ್ಲಿ ಕಡಿಮೆಯಾಗದ ನೀರಿನ ಮಟ್ಟ…!

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ನ.21- ನೂರು ದಿನ ಕಳೆದರೂ ಗರಿಷ್ಠ ಮಟ್ಟದ ನೀರು ಸಂಗ್ರಹಿಸುವ ಮೂಲಕ ಕೆಆರ್‍ಎಸ್ ಅಣೆಕಟ್ಟು ಹೊಸ ಇತಿಹಾಸ ಸೃಷ್ಟಿಸಿದೆ. ಅಣೆಕಟ್ಟಿನ ಗರಿಷ್ಠ ನೀರಿನ ಮಟ್ಟ 124.80 ಅಡಿ ಜಲಾಶಯ ಭರ್ತಿಯಾಗಿ 96 ದಿನ ಕಳೆದರೂ ನೀರಿನ ಮಟ್ಟ ಒಂದೇ ಒಂದು ಅಡಿ ಕೂಡ ಕಡಿಮೆಯಾಗದಿರುವುದು ಇದೇ ಪ್ರಪ್ರಥಮವಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಸುರಿದ ಮಳೆಯಿಂದಾಗಿ ಕಳೆದ ಆ.15ರಂದೇ ಜಲಾಶಯ ಭರ್ತಿಯಾಗಿತ್ತು.ಅಂದಿನಿಂದ ಇಂದಿನವರೆಗೂ ಗರಿಷ್ಟ ನೀರಿನ ಪ್ರಮಾಣ ಹಾಗೇ ಉಳಿದುಕೊಂಡಿದೆ.

ಅಣೆಕಟ್ಟಿನ 86 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ 96 ದಿನಗಳ ಕಾಲ ಸತತವಾಗಿ ನೀರು ಗರಿಷ್ಠ ಮಟ್ಟದಲ್ಲಿ ಉಳಿದುಕೊಂಡಿದೆ. 1933ರಲ್ಲಿ ನಿರ್ಮಿಸಲಾದ ಅಣೆಕಟ್ಟು ಇಂದು 5,926 ಕ್ಯೂಸೆಕ್‍ಗಳ ಒಳಹರಿವು ಮತ್ತು 5,718 ಕ್ಯೂಸೆಕ್‍ಗಳ ಹೊರ ಹರಿವುಗಳನ್ನು ದಾಖಲಿಸಿದೆ.

ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಮಟ್ಟವನ್ನು ತಲುಪಿದಾಗಿನಿಂದ ಅಣೆಕಟ್ಟಿನ ನಿರ್ವಹಣೆಯನ್ನು ನೋಡಿಕೊಳ್ಳುವ ಕಾವೇರಿ ನೀರಾವರಿ ನಿಗಮದ (ಸಿಎನ್‍ಎನ್‍ಎಲï) ಅಧಿಕಾರಿಗಳು, ಅಣೆಕಟ್ಟಿನಿಂದ ನದಿಗೆ ಮತ್ತು ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವುದರ ಬಗ್ಗೆ ನೀರಿನ ನಿಯಂತ್ರಣದ ಬಗ್ಗೆ ಸಾಲಷ್ಟು ಕಾಳಜಿ ವಹಿಸಿದ್ದಾರೆ.

Facebook Comments