ಸಿದ್ದು – ಎಚ್‌ಡಿಕೆ ವಿರುದ್ಧ ಈಶ್ವರಪ್ಪ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ. ಫೆ.17; ರಾಮ ಮಂದಿರ ಮತ್ತು ಗೋಹತ್ಯೆ ನಿಷೇಧ ಕಾಯ್ದೆ ಜಾರಿ ವಿರುದ್ಧ ಕೋತಿಗಳಂತೆ ಹೇಳಿಕೆ ನೀಡುವ ವಿಪಕ್ಷ ನಾಯಕರು ಜನಮಾನಸದಿಂದ ದೂರವಾಗುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ಹೇಳಿದರು. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗೋವು ಕಳ್ಳತನ, ಗೋಹತ್ಯೆ ಮಾಡಿತ್ತಿದ್ದರೆ ಕ್ರಮ ಜರುಗಿಸಿ ಎಂದು ಅಧಿಕಾರ ದಲ್ಲಿದ್ದಾಗ ಸಿದ್ದರಾಮಯ್ಯನವರಿಗೆ ಮನವಿ ಮಾಡಿದರೆ ಗೋರಕ್ಷಣೆ ಮಾಡಿದವರ ಮೇಲೇ ಕ್ರಮ ಜರುಗಿಸಿದ್ದರು. ಅದರಿಂದಲೇ ಅವರ ಸರ್ಕಾರ ಬಿದ್ದುಹೋಯಿತು ಎಂದರು.

ಈಗ ರಾಮ ಮಂದಿರದ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗೆ ಕೋತಿಗಳ ರೀತಿ ಮಾತನಾಡಿ ಜನರಿಂದ ಛೀ ಥೂ ಎಂದು ಬೈಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.ಸಿದ್ದರಾಮಯ್ಯನವರು ನಿಧಿ ಸಂಗ್ರಹದ ಬಗ್ಗೆ ಲೆಕ್ಕ ಕೇಳುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಲೆಕ್ಕ ಕೇಳಲು ಇವರು ಯಾರು? ರಾಮ ಭಕ್ತರು ಕೇಳಿದರೆ ಕೊಡಬಹುದು ಎಂದರು.

ಧರ್ಮದ ವಿರುದ್ಧ ಮತ್ತು ದೇಶದ ವಿರುದ್ಧ ಇವರ ಹೇಳಿಕೆ ಇರುವುದರಿಂದ ದೇಶದ‌ ಜನರು ಇವರನ್ನು ಕ್ಷಮಿಸುವುದಿಲ್ಲ ಎಂದ ಅವರು, ರಾಮ‌ಮಂದಿರ ನಿಧಿ ಸಂಗ್ರಹಕ್ಕೆ ಈ ರೀತಿ ಹೇಳಿಕೆ ನೀಡುತ್ತಿರುವ ನಾಯಕರು ಬಹಿರಂಗ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.

Facebook Comments