ಇದೇ 21 ರಂದು ಕೆಅರ್ ಎಸ್ ಜಲಾಶಯಕ್ಕೆ ಬಿಎಸ್‍ವೈ ಬಾಗಿನ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಆ. 16- ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಜಿಲ್ಲೆಯ ಕೆಆರ್‍ಎಸ್ ಜಲಾಶಯಕ್ಕೆ ಇದೇ 21 ರಂದು ಕಾವೇರಿ ಮಾತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಾಗಿನ ಅರ್ಪಿಸಲಿದ್ದಾರೆ.

ಈಗಾಗಲೇ ನಾಲ್ಕು ಬಾರಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿರುವ ಮುಖ್ಯಮಂತ್ರಿಗಳು, 5ನೇ ಬಾರಿ ಬಾಗಿನ ಅರ್ಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 2019ರ ಆಗಸ್ಟ್ ತಿಂಗಳಿನಲ್ಲಿ ಕೆಆರ್‍ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸುವ ಮೂಲಕ ಹೆಚ್ಚಿನ ಬಾರಿ ಬಾಗಿನ ಅರ್ಪಿಸಿದ ಕೀರ್ತಿಗೆ ಬಿಎಸ್‍ವೈ ಪಾತ್ರರಾಗಿದ್ದಾರೆ.

Facebook Comments

Sri Raghav

Admin