KSRP, IRB ಪಡೆಗಳಿಗೆ ಸುಸಜ್ಜಿತ, ಅತ್ಯಾಧುನಿಕ 102 ಹೊಸ ಬಸ್’ಗಳಿಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiha-CM

ಬೆಂಗಳೂರು,ಜ.27- ಜನರ ನಿರೀಕ್ಷೆಗೆ ತಕ್ಕಂತೆ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು.  ವಿಧಾನಸೌಧ ಮುಂಭಾಗದಲ್ಲಿ ಕೆಎಸ್ಆರ್ಪಿ, ಐಆರ್ಬಿ ಪಡೆಗಳಿಗೆ ಸುಸಜ್ಜಿತ ಹಾಗೂ ಅತ್ಯಾಧುನಿಕ 102 ಹೊಸ ಬಸ್ಗಳಿಗೆ ಚಾಲನೆ ನೀಡಿ ಮಾತನಾಡಿದರು.  ನಾಡಿನ ಜನತೆ ಶಾಂತಿ ಸುವ್ಯವಸ್ಥೆ ಬಯಸುವುದರ ಜೊತೆ ನಿರ್ಭೀತಿಯ ವಾತಾವರಣ ಇರಬೇಕು. ಕಾನೂನನ್ನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಬಯಸುತ್ತಾರೆ. ಅದಕ್ಕೆ ಪೂರಕವಾಗಿ ಪೊಲೀಸರು ಜವಾಬ್ದಾರಿ ನಿರ್ವಹಿಸಬೇಕು ಎಂದರು.  ಅಪರಾಧ ಮುಕ್ತ ಸಮಾಜ ಆಗದಿದ್ದರೂ ಅಪರಾಧವನ್ನು ನಿಯಂತ್ರಿಸಿ, ಶಿಕ್ಷಿಸಿ ಕಾನೂನಿನ ಬಗ್ಗೆ ಭಯ-ಗೌರವ ಮೂಡಿಸುವಂತಹ ಕೆಲಸ ಮಾಡಬೇಕು. ಪೊಲೀಸರಿಗೆ ಭತ್ಯೆ, ವೇತನ ಹೆಚ್ಚಳ, ಬಡ್ತಿ, ಆಧುನಿಕ ಸಲಕರಣಿಗಳ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

KSRP-1 ಕಾನ್ಸ್ಟೆಬಲ್ನಿಂದ ಪಿಎಸ್ಐವರೆಗೂ ಮಾಸಿಕ ಎರಡು ಸಾವಿರ ರೂ. ಭತ್ಯೆ ಹೆಚ್ಚಿಸಲಾಗಿದೆ. ಹೆಡ್ಕಾನ್ಸ್ಟೆಬಲ್ನಿಂದ ಎಎಸ್ಐ ಹುದ್ದೆಗೆ 300 ಮಂದಿಗೆ ಬಡ್ತಿ ನೀಡಿದರೆ, ಕಾನ್ಸ್ಟೆಬಲ್ನಿಂದ ಹೆಡ್ಕಾನ್ಸ್ಟೆಬಲ್ ಹುದ್ದೆಗೆ 1200 ಮಂದಿಗೆ ಭಡ್ತಿ ನೀಡಲಾಗಿದೆ. ಒಟ್ಟು 11 ಸಾವಿರ ಮಂದಿಗೆ ಭಡ್ತಿ ನೀಡಲು ಆದೇಶಿಸಲಾಗಿದೆ, 10 ವರ್ಷಕ್ಕೊಮ್ಮೆ ಭಡ್ತಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.   ಮೈಸೂರು ಬೆಂಗಳೂರಿನಲ್ಲಿ ಈಗಾಗಲೇ ಆರಂಭಿಸಿರುವ ಸಿಬಿಎಸ್ಸಿ ಕೇಂದ್ರ ಪಠ್ಯಕ್ರಮದ ಶಿಕ್ಷಣ ಸಂಸ್ಥೆಗಳನ್ನು ರಾಜ್ಯದ ಎಲ್ಲ ವಲಯಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಪೊಲೀಸ್ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.

20 ಕಿ.ಮೀಗೊಂದು ಗಸ್ತು ವಾಹನ:

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ 40 ಕಿ.ಮೀ ಒಂದರಂತೆ 100 ಇನೋವಾ ಗಸ್ತು ವಾಹನವನ್ನು ಈಗಾಗಲೇ ಲೋಕಾರ್ಪಣೆ ಮಾಡಿದ್ದು , ಮತ್ತೆ 20 ಕಿ.ಮೀ ಒಂದರಂತೆ 200 ಇನೋವಾ ವಾಹನಗಳ ಹೆದ್ದಾರಿ ಗಸ್ತುಗಾಗಿ ಒದಗಿಸಲಾಗುವುದು, ರಾಜಸ್ಥಾನದ ಮಾದರಿಯಲ್ಲಿ ಮಹಿಳಾ ಪೊಲೀಸರಿಗಾಗಿ ಮೀಸಲು ಪಡೆಗೆ ಒದಗಿಸುವ ಬಸ್ಗಳಲ್ಲಿ ಶೌಚಾಲಯ ಕಲ್ಪಿಸುವ ಪ್ರಯತ್ನವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು. ಪೊಲೀಸರಿಗಾಗಿ ಕ್ಯಾಂಟಿನ್, ಅತಿಥಿ ಗೃಹ ನಿರ್ಮಿಸಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಒಂದು ಸಾವಿರ ಭತ್ಯೆ ನೀಡಲಾಗುತ್ತಿದೆ ಎಂದು ಹೇಳಿದರು.

KSRP-2

ಪೊಲೀಸರು 24 ಗಂಟೆ ಕಾರ್ಯ ನಿರ್ವಹಿಸುವುದರಿಂದ ಗಲಭೆ, ಚುನಾವಣೆ, ಅಪರಾಧ, ಘಟನೆ ಜರುಗಿದ ಸಂದರ್ಭದಲ್ಲಿ ಶೀಘ್ರದಲ್ಲೇ ಪ್ರಯಾಣಿಸುವಂತೆ 102 ಬಸ್ಗಳನ್ನು 23 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ ಎಂದರು.  ಗೃಹಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ರಾಜ್ಯದ ಪೊಲೀಸ್ ಇಲಾಖೆಗೆ ಮೊಟ್ಟ ಮೊದಲ ಬಾರಿಗೆ 102 ಅತ್ಯಾಧುನಿಕ ಬಸ್ಗಳನ್ನು ಒದಗಿಸಿರುವುದು ಒಂದು ಮೈಲಿಗಲ್ಲು. 2000ನೇ ವರ್ಷದ ನಂತರ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೆಎಸ್ಆರ್ಪಿ ಮತ್ತು ಐಆರ್ಬಿಗೆ 102 ಬಸ್ಗಳನ್ನು ಲೋಕಾರ್ಪಣೆ ಮಾಡಲಾಗಿದೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪೊಲೀಸ್ ಇಲಾಖೆಗೆ ಒಂದು ಸಾವಿರ ವಾಹನ ಒದಗಿಸಲಾಗಿದೆ. ಪೊಲೀಸ್ ಸಿಬ್ಬಂದಿಗಳಿಗೆ ಪರಿಷ್ಕರಣೆ, ಭತ್ಯೆ ನೀಡುತ್ತಿರುವುದರಿಂದ ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು.

ಸಮಾರಂಭದಲ್ಲಿ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ಕೆಎಸ್ಆರ್ಪಿ ಎಡಿಜಿಪಿ ಭಾಸ್ಕರ್ರಾವ್, ಸಿಐಡಿ ಡಿಜಿಪಿ ಕಿಶೋರ್ ಚಂದ್ರ, ಐಜಿಪಿ ಚರಣ್ ರೆಡ್ಡಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

102 ಅತ್ಯಾಧುನಿಕ ಬಸ್ ಖರೀದಿ: ಡಿಜಿ

ಬೆಂಗಳೂರು,ಜ.27- ಕೆಎಸ್‍ಆರ್‍ಪಿ ಮತ್ತು ಐಆರ್‍ಬಿ ತುಕ್ಕಡಿಗಳಿಗೆ 102 ಅತ್ಯಾಧುನಿಕ ಬಸ್‍ಗಳನ್ನು ಖರೀದಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪಕ್ರಾಶ್ ತಿಳಿಸಿದರು.
ವಿಧಾನಸೌಧದ ಮುಂಭಾಗ ಸುದ್ದಿಗಾರರ ಜೊತೆ ಮಾತನಾಡಿದ ಅವರು, 20 ವರ್ಷ ಹಳೆಯ ಬಸ್‍ಗಳಲ್ಲಿದ್ದವು. ತುರ್ತು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ತೆರಳಲು ತೊಂದರೆ ಆಗಿತ್ತು. ಇದನ್ನು ನಿವಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಪ್ರತಿ ಬಸ್‍ಗೆ 21.63 ಲಕ್ಷ ರೂ.ನಂತೆ 22.63 ಕೋಟಿ ರೂ. ವೆಚ್ಚದಲ್ಲಿ ಬಸ್‍ಗಳನ್ನು ಖರೀದಿಸಲಾಗಿದೆ.
ಬಸ್ ಒಳಭಾಗದಲ್ಲಿ ಮಾರ್ಪಾಡು ಮಾಡಲಾಗಿದ್ದು, ಲಗೇಜ್ ರ್ಯಾಕ್, ಶಸ್ತ್ರಾಸ್ತ್ರಗಳ ರ್ಯಾಕ್, ಮೊಬೈಲ್ ಚಾರ್ಜರ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಒದಗಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಶೀಘ್ರವಾಗಿ ಪ್ರಯಾಣಿಸಲು ನೂತನ ಬಸ್ ಅನುಕೂಲವಾಗಿದೆ ಎಂದು ಹೇಳಿದರು.   ತುಮಕೂರಿನಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೆÇಲೀಸರು ಉತ್ತಮ ರೀತಿ ಕೆಲಸ ಮಾಡುತ್ತಿದ್ದಾರೆ. ತನಿಖೆ ಮುಂದುವರೆದಿದ್ದು ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin