ಕೆಎಸ್ಆರ್‌ಟಿಸಿ ನೌಕರರಿಗೆ ಹೋಮಿಯೋಪತಿ ಔಷಧಿ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.9- ನಿಗಮದ ಸಿಬ್ಬಂದಿಗಳು ಕೋವಿಡ್-19 ಎದುರಿಸುವಲ್ಲಿ ಅನುಸರಿಸಬೇಕಾದ ಮುಂಜಗ್ರತಾ ಕ್ರಮಗಳ ಬಗ್ಗೆ ಕಾರ್ಯಗಾರ ಮತ್ತು ರೋಗ ನಿರೋಧಕ ಹೋಮಿಯೋಪತಿ ಔಷಧಿಗಳ ವಿತರಣೆ ಕಾರ್ಯಕ್ರಮವನ್ನು ಹೋಮಿಯೋಪತಿ ವೈದ್ಯ ಡಾ.ಬಿ.ಟಿ.ರುದ್ರೇಶ್ ಅವರ ನೇತೃತ್ವದಲ್ಲಿ ಕೆಎಸ್ಆರ್‌ಟಿಸಿ ಕೇಂದ್ರೀಯ ವಿಭಾಗದಲ್ಲಿ ಏರ್ಪಡಿಸಲಾಗಿತ್ತು.

ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕೋವಿಡ್-19 ಸಾರಿಗೆ ಸಂಸ್ಥೆಗಳಿಗೆ ಹೊಸ ಸವಾಲನ್ನು ತಂದೊಡ್ಡಿದೆ. ನಮ್ಮ ಸಿಬ್ಬಂದಿಗಳು, ಅದರಲ್ಲಿಯೂ ಚಾಲಕ ನಿರ್ವಾಹಕರು ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.

ಅವರಿಗೂ ಭಯವಿದೆ. ಈ ಸಮಯ ದಲ್ಲಿನಾವು ಎಷ್ಟೇ ಮಾರ್ಗಸೂಚಿಗಳನ್ನು ಹೊರಡಿಸಿದರೂ, ಅದನ್ನು ವೈದ್ಯರು ಹೇಳಿದರೆ ಅದಕ್ಕೆ ಮನ್ನಣೆ ಹೆಚ್ಚು ಮತ್ತು ಸಿಬ್ಬಂದಿಗಳಲ್ಲಿ ಒಂದು ರೀತಿಯ ಆಶಾಭಾವ ಬರುತ್ತದೆಂಬ ಕಾರಣದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಡಾ.ಬಿ.ಟಿ.ರುದ್ರೇಶ್ ಮಾತನಾಡಿ, ಕೊವಿಡ್ ಭಯ ಬೇಡ ಜಾಗ್ರತೆ ಇರಬೇಕು, ಭಯದಿಂದಲೇ ನಮ್ಮಲ್ಲಿನ ರೋಗ ನಿರೋಧಕ ಶಕ್ತಿಯು ಕುಂದುತ್ತದೆ. ಹೋಮಿಯೋಪತಿ ಔಷಧವನ್ನು ತೆಗೆದುಕೊಳ್ಳುವುದರಿಂದ ಒಂದು ರೀತಿ ನಿರೋಧಕ ಕವಚ ರೀತಿ ಕೆಲಸ ಮಾಡುತ್ತದೆ. ಆದರೆ ಸಾಮಾಜಿಕ ಅಂತರ , ಮಾಸ್ಕ್ ಧರಿಸುವುದು, ಸ್ವಚ್ಛತೆ ಕಾಪಾಡುವುದನ್ನು ಬಿಡಬಾರದು.

ಕೊರೊನಾದಿಂದ ಭಯ ಮುಕ್ತರಾಗಿ ಜಾಗ್ರತೆ ವಹಿಸಿ ಕೆಲಸ ನಿರ್ವಹಿಸಿ. ಈ ರೀತಿಯ ಕಾರ್ಯಕ್ರಮಗಳು ಸಿಬ್ಬಂದಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಬಹುಉಪಯುಕ್ತವಾಗುತ್ತವೆ ಹಾಗೂ ಆತ್ಮಸ್ಥೆರ್ಯ ಹೆಚ್ಚಿಸುವ ಉಪಕ್ರಮವಾಗಿದೆ ಎಂದು ತಿಳಿಸಿದರು. ಕವಿತಾ ಎಸ್.ಮನ್ನಿಕೇರಿ , ಡಾ.ರಾಮ್ ನಿವಾಸ್ ಸಪೆಟ್, ಡಾ. ಹರೀಶ್, ಮುಖ್ಯ ವೈದ್ಯಾಧಿಕಾರಿ, ಹಿರಿಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Facebook Comments