ಬೆಂಗಳೂರಲ್ಲಿ ಕೆಎಸ್‌ಆರ್‌ಟಿಸಿ-ಬಿಎಂಟಿಸಿ ಸೇವೆ ಸ್ಥಗಿತ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.14- ಕೋವಿಡ್ -19 ವೈರಸ್ ಹರಡುವುದನ್ನು ನಿಯಂತ್ರಿಸಲು ಬೆಂಗಳೂರು ಸೇರಿದಂತೆ ಲಾಕ್ಡೌನ್ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ಕೆಎಸ್ ಆರ್ ಟಿಸಿ ಬಸ್ ಮತ್ತು ಬಿಎಂಟಿಸಿ ಬಸ್ ಸೇವೆ ಇರುವುದಿಲ್ಲ.

ಇಂದು ರಾತ್ರಿಯಿಂದ ಲಾಕ್ ಡೌನ್ ಜಾರಿಯಾಗುವುದರಿಂದ ರಾತ್ರಿ ಎಂಟು ಗಂಟೆಯವರೆಗೆ ಮಾತ್ರ ಬಸ್ ಸಲಭ್ಯವಿರುತ್ತದೆ ಎಂದು ಕೆಎಸ್ ಆರ್ ಟಿಸಿ ಪ್ರಕಟಣೆ ತಿಳಿಸಿದೆ‌.

ಆದರೆ, ವೈದ್ಯಕೀಯ ತುರ್ತು ಬಸ್ ಸೇವೆ ಮಾತ್ರ ಇರುತ್ತದೆ. ಸಾಮಾನ್ಯ ಬಸ್ ಸೇವೆ ಇರುವುದಿಲ್ಲ ಎಂದು ಬಿಎಂಟಿಸಿ ತಿಳಿಸಿದೆ‌. ಹೀಗಾಗಿ ನಾಳೆಯಿಂದ ಲಾಕ್ಡೌನ್ ಮುಗಿಯುವವರೆಗೂ ಬೆಂಗಳೂರಿನಲ್ಲಿ ಬಸ್ ಸೌಲಭ್ಯ ಇರುವುದಿಲ್ಲ.

ಲಾಕ್ ಡೌನ್ ಮುಗಿಯುವವರೆಗೂ ಬೆಂಗಳೂರು ಸೇರಿದಂತೆ ಲಾಕ್ ಡೌನ್ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ಬಸ್ ಸೇವೆ ಇರುವುದಿಲ್ಲ. ಆದರೆ, ಉಳಿದ ಜಿಲ್ಲೆಗಳಲ್ಲಿ ಯಥಾ ರೀತಿ ಬಸ್ ಸಂಚಾರ ಇರುತ್ತದೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ‌ 1100 ‌‌ಬಸ್ಸುಗಳನ್ನು ಬೆಂಗಳೂರಿನಿಂದ ಇತರೆ ಸ್ಥಳಗಳಿಗೆ ಹೆಚ್ಚುವರಿಯಾಗಿ ಕಾರ್ಯಚರಣೆ ಮಾಡಲು ಉದ್ದೇಶಿಸಲಾಗಿದೆ‌ ಎಂದು ಕೆಎಸ್ ಆರ್ ಟಿಸಿ ತಿಳಿಸಿದೆ‌
ನಿನ್ನೆ ರಾತ್ರಿ 8 ಗಂಟೆಯವರೆಗೆ ಒಟ್ಟು 1100 ಬಸ್ಸುಗಳನ್ನು ಬೆಂಗಳೂರಿನಿಂದ ಕಾರ್ಯಚರಣೆಗೊಳಿಸಿದ್ದು, 32000 ಪ್ರಯಾಣಿಕರು ಪ್ರಯಾಣಿಸಿದ್ದರು.

ಪ್ರಮುಖ ಸ್ಥಳಗಳಾದ ಬಳ್ಳಾರಿ, ದಾವಣಗೆರೆ,
ಹೊಸದುರ್ಗ, ಯಾದಗಿರಿ, ಹಾಸನ, ಕಲಬುರಗಿ, ಶಿವಮೊಗ್ಗ, ತಿರುಪತಿ, ಅನಂತಪುರ, ಪಾವಗಡಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳು ಕಾರ್ಯಾಚರಣೆಯಾಗಿವೆ.

ಬೆಂಗಳೂರು ನಗರದಲ್ಲಿ 20 ಪಿಕ್‌ಅಪ್ ಸ್ಥಳಗಳಿಂದ ಬಸ್ಸುಗಳನ್ನು ಕಾರ್ಯಚರಣೆಗೊಳೊಸಲಾಗುತ್ತಿದೆ. ಈ ಎಲ್ಲಾ ಸ್ಥಳಗಳಲ್ಲಿಯೂ ಪ್ರತಿಯೊಬ್ಬ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಪ್ರಮುಖ ಪಿಕ್‌ಅಪ್‌ ಪಾಯಿಂಟ್ ಗಳಲ್ಲಿ ಕೇಂದ್ರ ಕಛೇರಿಯ ಹಿರಿಯ ಅಧಿಕಾರಿಗಳನ್ನು ಬಸ್ಸುಗಳ ಕಾರ್ಯಚರಣೆಗಾಗಿ ನಿಯೋಜಿಸಲಾಗಿತ್ತು‌ ಎಂದು ತಿಳಿಸಲಾಗಿದೆ.

Facebook Comments

Sri Raghav

Admin