ನಾಳೆ ಎಂದಿನಂತೆ ಸಂಚರಿಸಲಿವೆ ಬಿಎಂಟಿಸಿ-ಕೆಎಸ್‌ಆರ್‌ಟಿಸಿ ಬಸ್‌ಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ30-ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ನಾಳೆ ಬೆಳ್ಳಗ್ಗೆ 7ರಿಂದ ಸಂಜೆ 7ಗಂಟೆಯವರೆಗೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‍ಗಳ ಸೇವೆ ಎಂದಿನಂತೆ ಇರಲಿದೆ.

ರಾಜ್ಯ ಸರ್ಕಾರ ಲಾಕ್‍ಡೌನ್ ತೆರವು ಮಾಡಿರುವುದರಿಂದ ಯಥಾರೀತಿ ಪ್ರಯಾಣಿಕರಿಗೆ ಬಸ್ ಸೇವೆ ಒದಗಿಸುವುದಾಗಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಮೂಲಗಳು ತಿಳಿಸಿವೆ.

ಲಾಕ್‍ಡೌನ ಸಡಿಲಿಕೆಯಾಗಿರುವುದರಿಂದ ಕೆಎಸ್‌ಆರ್‌ಟಿಸಿ 3500 ಬಸ್ ಸೇವೆ ಒದಗಿಸಲು ಉದ್ದೇಶಿಸಿದೆ. ಹಾಗೆಯೇ ಬಿಎಂಟಿಸಿಯು ನಗರದ ಎಲ್ಲಾ ಕಡೆಗಳಲ್ಲಿ ಬಸ್ ಸೌಲಭ್ಯವನ್ನು ಯಥಾರೀತಿ ಮುಂದುವರೆಸಲಿದೆ.

ಆದರೆ, ನಾಳೆ ರಾತ್ರಿ 7ಗಂಟೆಯ ನಂತರ ಕಫ್ರ್ಯೂ ಮುಂದುವರೆಯುವುದರಿಂದ ಬಸ್ ಸಂಚಾರ ಇರುವುದಿಲ್ಲ. ಸೋಮವಾರ ಬೆಳಗ್ಗೆ 7 ಗಂಟೆಯ ನಂತರ ಯಥಾರೀತಿ ಬಸ್ ಸೇವೆ ಮುಂದುವರೆಯಲಿದೆ.

Facebook Comments