ಆಕ್ಸಲ್ ಕಟ್ ಆಗಿ ಡಿವೈಡರ್ ಮೇಲೆ ಚಲಿಸಿದ ಬಸ್, ತಪ್ಪಿದ ಭಾರೀ ಅಪಘಾತ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜು.9- ಚಲಿಸುತ್ತಿದ್ದ ಸಾರಿಗೆ ಬಸ್‍ನ ಆಕ್ಸಲ್ ಕಟ್ಟಾದ ಪರಿಣಾಮ ರಸ್ತೆ ವಿಭಜಕದ ಮೇಲೆ ಚಲಿಸಿದ್ದು , ಚಾಲಕನ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ಭಾರೀ ಅಪಘಾತ ತಪ್ಪಿದಂತಾಗಿದೆ.

ಶಿವಮೊಗ್ಗದಿಂದ ತಿಪಟೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ತಿಪಟೂರು ತಾಲ್ಲೂಕಿನ ಬಿದರೇಗುಡಿ ಗ್ರಾಮದ ಬಳಿ ಆಕ್ಸಲ್ ಕಟ್ಟಾಗಿದ್ದು , ಚಾಲಕ ಕೂಡಲೇ ಪಕ್ಕದ ರಸ್ತೆಯಲ್ಲಿ ಯಾವುದೇ ವಾಹನ ಬರದಿರುವುದನ್ನು ಗಮನಿಸಿ ಡಿವೈಡರ್ ಮೇಲೆ ಹತ್ತಿಸಿ ವೇಗವನ್ನು ನಿಯಂತ್ರಿಸಿದ್ದಾನೆ.

ಬಸ್ ಡಿವೈಡರ್ ಮೇಲೆ ಹತ್ತಿದ ಪರಿಣಾಮ ಅಲ್ಲೇ ನಿಂತಿತ್ತು. ಇದರಿಂದ ಏಳೆಂಟು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು , ಬಸ್‍ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಿಪಟೂರು ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಕೃಷ್ಣರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin