ರಾತ್ರಿ 9ರವರೆಗೂ ಸಂಚರಿಸಲಿವೆ ಕೆಎಸ್ಆರ್‌ಟಿಸಿ ಬಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.1-ಲಾಕ್‍ಡೌನ್ ಸಡಿಲಿಕೆಯಾಗಿರುವ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸಂಚಾರವನ್ನು ರಾತ್ರಿ 9 ಗಂಟೆಯವರೆಗೂ ವಿಸ್ತರಿಸಲಾಗಿದೆ.

ಇಂದಿನಿಂದ ರಾತ್ರಿ 9 ಗಂಟೆಯವರೆಗೂ ಬಸ್ಸುಗಳ ಕಾರ್ಯಾಚರಣೆ ಮಾಡುವುದಾಗಿ ಕೆಎಸ್ಆರ್‌ಟಿಸಿ  ಪ್ರಕಟಣೆ ತಿಳಿಸಿದೆ. ಬೆಳಗ್ಗೆ 7ರಿಂದ ಸಂಜೆ 7ರವರೆಗೂ ಬಸ್ ಸೇವೆ ಆರಂಭಿಸಲಾಗಿತ್ತು.

ದೂರದ ನಗರ-ಪಟ್ಟಣಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ರಾತ್ರಿ 9ಗಂಟೆಯವರೆಗೂ ಬಸ್ ಸೇವೆ ವಿಸ್ತರಿಸಲಾಗಿದೆ. ಜತೆಗೆ ನಾಳೆಯಿಂದ ಬೆಳಗ್ಗೆ 5 ಗಂಟೆಯಿಂದಲೂ ಬಸ್ ಸೇವೆ ಆರಂಭಿಸಲಿದೆ. ನಾಳೆಯಿಂದ ಬೆಳಗ್ಗೆ 5ರಿಂದ ರಾತ್ರಿ 9ಗಂಟೆಯವರೆಗೂ ಬಸ್ ಸೇವೆ ಒದಗಿಸಲಾಗುತ್ತದೆ ಎಂದು ಕೆಎಸ್ಆರ್‌ಟಿಸಿ ತಿಳಿಸಿದೆ.

ಬಿಎಂಟಿಸಿಯೂ ರಾತ್ರಿ 9 ಗಂಟೆಯವರೆಗೂ ಬಸ್ ಸೇವೆ ವಿಸ್ತರಿಸಲು ಚಿಂತನೆ ನಡೆಸಿದ್ದು, ಸರ್ಕಾರದ ಅನುಮತಿ ನಿರೀಕ್ಷೆಯಲ್ಲಿದೆ. ಇಂದಿನಿಂದ ನಗರದ ವಿವಿದೆಡೆ 75 ವೋಲ್ವೋ ಬಸ್ ಸೇವೆ ಆರಂಭಿಸಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಬಿಎಂಟಿಸಿ ತಿಳಿಸಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊಸಕೋಟೆ, ಕಾಡುಗೋಡಿ, ಸರ್ಜಾಪುರ, ಅತ್ತಿಬೆ¯ ವರೆಗೆ ಹಾಗೂ ಬನಶಂಕರಿಯಿಂದ ಹೆಬ್ಬಾಳ, ಐಟಿಪಿಎಲ್, ಸಿಲ್ಕ್‍ಬೋರ್ಡ್ ನಡುವೆ ವೋಲ್ವೋ ಸಂಚಾರ ಆರಂಭಿಸಲಾಗಿದೆ.

Facebook Comments