ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕೆಎಸ್‌ಆರ್‌ಟಿಸಿ ಬಸ್, ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

KSRTC--01
ಬೆಳಗಾವಿ, ಜು.14- ಕೆಎಸ್‍ಆರ್‍ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 4ರ ಬಡೆಕೊಳ್ಳ ಗ್ರಾಮದ ಬಳಿ ನಡೆದಿದೆ. ಬೆಳಗಾವಿಯಿಂದ ಉಡುಪಿಗೆ ತೆರಳುತ್ತಿದ್ದ ಬಸ್ ಹಿರೀಬಾಗವಾಡಿ ಬಳಿ ಬೆಳಗ್ಗೆ 6.45ರ ಸಂದರ್ಭದಲ್ಲಿ ಬಡೆಕೊಳ್ಳ ಕ್ರಾಸ್ ಬಳಿ ಅಪಘಾತಕ್ಕೆ ಒಳಗಾಗಿದೆ. ಬಸ್ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಪ್ರಯಾಣಿಕರನ್ನು ಹೊರಗೆ ಕರೆ ತರಲು ಭಾರೀ ಪ್ರಯಾಸ ಪಡಬೇಕಾಯಿತು. ಉಡುಪಿ ಡಿಪೋನ ಈ ಬಸ್ ಬೆಳಗ್ಗೆ ಗಂಟೆಗೆ ಹೊರಟಿತು ಎಂದು ತಿಳಿದು ಬಂದಿದೆ.

Facebook Comments

Sri Raghav

Admin