ಬೈಕ್‍ಗೆ ಕೆಎಸ್ಆರ್‌ಟಿಸಿ ಡಿಕ್ಕಿ, ಸ್ಥಳದಲ್ಲೇ ಸವಾರ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸ‌ನ: ರಾಷ್ಟ್ರೀಯ ಹೆದ್ದಾರಿ 75 ರ ಹಾಸನ – ಸಕಲೇಶಪುರ ರಸ್ತೆ ಮಾರ್ಗದಲ್ಲಿ ಅಪಘಾತದ ಸರಣಿ‌ ಮುಂದುವರೆದಿದ್ದು ಇಂದು ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವ ಗಂಭೀರವಾಗಿ‌ ಗಾಯ ಗೊಂಡಿದ್ದಾರೆ.

ಸಕಲೇಶಪುರ ದ ಆನೆಮಹಲ್ ಬಳಿ ಈ ಅಪಘಾತ ಸಂಭವಿಸಿದ್ದು ಮೃತ ವ್ಯಕ್ತಿಯ ನ್ನು ಮಾಗೇರಿ‌ ಗ್ರಾಮದ ಹರೀಶ್ (45) ಎಂದು ಗುರುತಿಸಲಾಗಿದೆ .ಇವರ ಮಗನಿಗೆ ಗಂಭೀರ ಗಾಯಗಳಾಗಿದ್ದು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರು ‌ಬೈಕ್ನಲ್ಲಿ ಸಕಲೇಶಪುರ ದಿಂದ ನಲ್ಲೂರಿಗೆ ಹೋಗುವಾಗ ಎದುರಿಗೆ ಬಂದ ಪುತ್ತೂರು ಡಿಪೋಗೆ ಸೇರಿದ ‌ಸಾರಿಗೆ ಬಸ್ ಬೈಕ್ಗೆ ಡಿಕ್ಕಿ‌ ಹೊಡೆದಿದ್ದು ಬಸ್ ನ ಮುಂಭಾಗದ ಚಕ್ರಕ್ಕೆ ಸಿಲುಕಿದ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ‌.
ಮೈತ ಹರೀಶ್ ಶವವನ್ನು ಮರಣೋತ್ತರ ಪರೀಕ್ಷೆಗೆ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು. ಸಕಲೇಶಪುರ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin