ಇಂದು‌ ಮತ್ತು ನಾಳೆ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಹೋಗುವವರ ಗಮನಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.13-ಕೆಎಸ್ ಆರ್ ಟಿಸಿ ವತಿಯಿಂದ ಇಂದು‌ ಮತ್ತು ನಾಳೆ ಪ್ರತಿ ದಿನ 800 ‌‌ಬಸ್ಸುಗಳನ್ನು ಬೆಂಗಳೂರಿನಿಂದ ಬೇರೆ ಬೇರೆ ನಗರ, ಪಟ್ಟಣಗಳಿಗೆ ಹೆಚ್ಚುವರಿಯಾಗಿ ಕಾರ್ಯಚರಣೆ ಮಾಡಲು ಯೋಜಿಸಲಾಗಿದೆ‌.

ಇಂದು ಬೆಳಿಗ್ಗೆ 10 ಗಂಟೆಯವರೆಗೆ 249 ಬಸ್ಸುಗಳನ್ನುಬೆಂಗಳೂರಿನಿಂದ ಕಾರ್ಯಚರಣೆಗೊಳಿಸಿದ್ದು, 6641 ಪ್ರಯಾಣಿಕರು ಈಗಾಗಲೇ ಪ್ರಯಾಣಿಸಿರುತ್ತಾರೆ. ಈಗಾಗಲೇ 231 ಬಸ್ಸುಗಳು ಮುಂಗಡ ಬುಕ್ಕಿಂಗ್ ಆಗಿವೆ.

ಸಾಮಾಜಿಕ ಅಂತರ ಕಾಪಾಡಿ, ಪ್ರತಿಯೊಬ್ಬ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಕೆಎಸ್ ಆರ್ ಟಿಸಿ ಪ್ರಕಟಣೆ ತಿಳಿಸಿದೆ.

ಸಾರ್ವಜನಿಕರು ವೃಥಾ ಆತಂಕಕ್ಕೆ ಒಳಗಾಗಬೇಡಿ. ಅತೀ ಹೆಚ್ಚು ಬಸ್ಸುಗಳನ್ನು ಕಾರ್ಯಾಚರಣೆಗೆ ನಿಯೋಜಿಸಲು ಈಗಾಗಲೇ ಯೋಜಿಸಲಾಗಿದೆ ಕೆಎಸ್ ಆರ್ ಟಿಸಿ ಮನವಿ ಮಾಡಿದೆ.

Facebook Comments

Sri Raghav

Admin