ರಸ್ತೆಗಿಳಿದ 1700ಕ್ಕೂ ಹೆಚ್ಚು ಬಸ್, ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ಸಂಬಳ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.11- ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವಲ್ಲಿ ಬದ್ಧತೆ ತೋರಿದ ಸಿಬ್ಬಂದಿಗೆ ನಾಳೆ ಮಾರ್ಚ್ ತಿಂಗಳ ವೇತನ ಪಾವತಿ ಮಾಡಲು ಆದೇಶಿಸಲಾಗಿದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ್ ತಿಳಿಸಿದ್ದಾರೆ.

ಮುಷ್ಕರಕ್ಕೆ ಪ್ರಚೋದನೆ ನೀಡಿ, ಕರ್ತವ್ಯ ನಿರ್ವಹಿಸುತ್ತಿರುವಾಗ ಸಹ ಸಿಬ್ಬಂದಿಗಳಿಂದ ಜೀವ ಬೆದರಿಕೆ ಇದ್ದಾಗಲೂ ಬಸ್ಗಳನ್ನು ಕಾರ್ಯಾಚರಣೆ ಮಾಡಿರುವ ಸಿಬ್ಬಂದಿಗೆ ವೇತನ ಪಾವತಿಸುವಂತೆ ಆದೇಶಿಸಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರಿಗೆ ನೌಕರರ ಮುಷ್ಕರದ ಸಂದರ್ಭದಲ್ಲಿ ನಿಗಮದ ವಿದ್ಯಾರ್ಥಿ ಹಾಗೂ ಮಾಸಿಕ ಬಸ್ಪಾಸ್ ಹೊಂದಿದವರಿಗೆ ಅನಾನುಕೂಲವಾಗಿರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮುಷ್ಕರದ ಅವಯ ದಿನಗಳಿಗೆ ಸರಿಸಮನಾಗಿ ಬಸ್ಪಾಸ್ಗಳ ಅವಯನ್ನು ವಿಸ್ತರಿಸಿ ಆದೇಶಿಸಿರುವುದಾಗಿ ಅವರು ತಿಳಿಸಿದ್ದಾರೆ.

# Related News : 
* ಬಿಗ್ ಬ್ರೇಕಿಂಗ್ : ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಫಿಕ್ಸ್..!?
BREAKING : ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಮುನ್ಸೂಚನೆ ಕೊಟ್ಟ ಸಚಿವ ಸುಧಾಕರ್..!
* ಇಂದಿನಿಂದ ಲಸಿಕಾ ಉತ್ಸವ ಆರಂಭ : ಭಯ ಬಿಟ್ಟು ಲಸಿಕೆ ಪಡೆಯುವಂತೆ ಸಿಎಂ ಮನವಿ

# 1772 ಬಸ್ ಸಂಚಾರ :
– ಸಾರಿಗೆ ನೌಕರರ ಮುಷ್ಕರದ ನಡುವೆಯೂ ಮಧ್ಯಾಹ್ನ 12 ಗಂಟೆವರೆಗೆ ನಾಲ್ಕೂ ಸಾರಿಗೆ ಸಂಸ್ಥೆಗಳಿಂದ 1772 ಬಸ್ ಸಂಚಾರ ಆರಂಭಿಸಿದ್ದವು. ಮುಷ್ಕರ ಸತತ ಐದನೆ ದಿನಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಕರ್ತವ್ಯಕ್ಕೆ ಹಾಜರಾಗುವ ನೌಕರರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇಂದು ವಿರಳವಾಗಿ ಬಸ್ ಸಂಚಾರವಿತ್ತು.

ಸಾರಿಗೆ ಇಲಾಖೆ ಮಾಹಿತಿ ಪ್ರಕಾರ 848 ಕೆಎಸ್ಆರ್ಟಿಸಿ, 212 ಬಿಎಂಟಿಸಿ, 444 ಎನ್ಇ ಕೆಎಸ್ಆರ್ಟಿಸಿ, 268 ಎನ್ಡಬ್ಲ್ಯೂ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಿದ್ದವು. ಮುಷ್ಕರದ ನಡುವೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಸೂಕ್ತ ರಕ್ಷಣೆ ಹಾಗೂ ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು
ಕೆಎಸ್ಆರ್ಟಿಸಿ ಪ್ರಕಟಣೆ ತಿಳಿಸಿದೆ.

Facebook Comments

Sri Raghav

Admin