ಟ್ಯಾಂಕ್‍ನ ಪೈಪ್ ಒಡೆದು ಐರಾವತ ಬಸ್‍ನ 300 ಲೀಟರ್ ಡೀಸೆಲ್ ಮಣ್ಣು ಪಾಲು

ಈ ಸುದ್ದಿಯನ್ನು ಶೇರ್ ಮಾಡಿ

KSRTC-Bus--Diesel
ಶ್ರೀರಂಗಪಟ್ಟಣ, ಜೂ.1- ಕೆಎಸ್‍ಆರ್‍ಟಿಸಿ ಐರಾವತ ಬಸ್‍ನ ಡೀಸೆಲ್ ಟ್ಯಾಂಕ್‍ನ ಪೈಪ್ ಒಡೆದು ಸುಮಾರು 300 ಲೀಟರ್ ಡೀಸೆಲ್ ಮಣ್ಣು ಪಾಲಾಗಿರುವ ಘಟನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರುಮುಖವಾಗುತ್ತಲೇ ಇದೆ. ಅಂತಹುದರಲ್ಲಿ 300 ಲೀಟರ್ ಡೀಸೆಲ್ ಭೂಮಿ ಪಾಲಾಗಿರುವುದು ನಿಜಕ್ಕೂ ದುರ್ದೈವದ ಸಂಗತಿ.

ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಐರಾವತ ಸಾರಿಗೆ ಬಸ್‍ನ ಡೀಸೆಲ್ ಟ್ಯಾಂಕ್ ಪೈಪ್ ಒಡೆದು ಹೋಗಿರುವುದರಿಂದ ಶ್ರೀರಂಗಪಟ್ಟಣದ ಕೆ.ಶೆಟ್ಟಿಹಳ್ಳಿ ಗ್ರಾಮದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಡೀಸೆಲ್ ಸುರಿದು ಹೋಗಿದೆ. ಡೀಸೆಲ್ ಖಾಲಿಯಾಗಿರುವುದು ಅರಿವಿಗೆ ಬಂದ ತಕ್ಷಣ ಚಾಲಕ ಬಸ್‍ಅನ್ನು ರಸ್ತೆ ಬದಿಗೆ ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗಿಳಿಸಿ ಮುಂದಾಗಬಹುದಾದ ಅನಾಹುತ ತಪ್ಪಿಸಿದ್ದಾನೆ.

Facebook Comments

Sri Raghav

Admin