ಪ್ರಯಾಣಿಕರು -ಸಿಬ್ಬಂದಿ ಸುರಕ್ಷತೆಗೆ ಮೊದಲ ಆದ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.18- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ವಿಭಾಗಗಳಲ್ಲಿ ಮಾಸ್ಕ್ ದಿನವನ್ನು ಇಂದು ಆಚರಿಸಲಾಯಿತು. ಬೆಂಗಳೂರು ಕೇಂದ್ರೀಯ ವಿಭಾಗ, ಘಟಕ-2ರಲ್ಲಿ ಕೆಕೆಎಸ್ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ್, ಕೊವಿಡ್-19ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವ ಅವಶ್ಯಕತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಿಗಮದ ಕಾರ್ಯಾಗಾರ ದಲ್ಲಿಯೇ ತಯಾರಿಸಿರುವ ಮಾ¸್ಕïಗಳನ್ನು ಸಿಬ್ಬಂದಿಗಳಿಗೆ ವಿತರಿಸಿ ಮಾತನಾಡಿದ ಅವರು, ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿ, ಕೋವಿಡ್‍ಗೆ ಲಸಿಕೆ ಬರುವವರೆಗೂ ಮುಂಜಾಗ್ರತಾ ಕ್ರಮ ಕೈಗೊಳ್ಳುವುದೇ ಕೊವಿಡ್‍ನಿಂದ ರಕ್ಷಿಸಲು ಇರುವ ಏಕೈಕ ಮಾರ್ಗವಾಗಿದೆ ಎಂದು ತಿಳಿಸಿದರು.

ಎಲ್ಲಾ ಸಿಬ್ಬಂದಿಗಳಿಗೂ ಮಾಸ್ಕ್‍ಗಳನ್ನು ನೀಡಲಾಗಿದ್ದು, ಯಾವುದೇ ಸಣ್ಣ ಪ್ರಮಾಣದ ತೊಂದರೆ , ಸಮಸ್ಯೆಗಳಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳುವಂತೆ ಸಲಹೆ ಮಾಡಿದರು. ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆ ನಮ್ಮ ಪ್ರಥಮ ಆದ್ಯತೆಯಾಗಿದೆ. ನಮ್ಮ ಬಸ್‍ಗಳಲ್ಲಿನ ಪ್ರಯಾಣ ಸುರಕ್ಷತೆಯಿಂದ ಕೂಡಿದೆ ಎಂಬ ನಂಬಿಕೆಯನ್ನು ಸಾರ್ವಜನಿಕರಲ್ಲಿ ಮೂಡಿಸುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ನಮ್ಮ ಸ್ವಚ್ಚತಾ ಕ್ರಮಗಳು ಪರಿಣಾಮಕಾರಿಯಾಗಿರಬೇಕು ಎಂದರು.

ನಿಗಮದಲ್ಲಿ ಇಂದು ಎಲ್ಲಾ ವಿಭಾಗಗಳಲ್ಲಿ ಮಾಸ್ಕ್ ದಿನ ಆಚರಿಸಲಾಗುತ್ತಿದ್ದು, ಇಂದಿಗೆ ಮಾತ್ರ ಇದು ಸೀಮಿತವಾಗದೆ, ಜಾಗೃತಿ ನಿರಂತರವಾಗಿ ಜರುಗಬೇಕು ಎಂದು ತಿಳಿಸಿದರು. ಮಾಸ್ಕ್ ಧರಿಸುವ ಬಗ್ಗೆ ಸಂವಹನ ಫಲಕಗಳನ್ನು ಪ್ರದರ್ಶಿಸಿ, ಜಾಗೃತಿ ಮೂಡಿಸಲಾಯಿತು. ಕೆಎಸ್‍ಆರ್‍ಟಿಸಿಯ ನಿರ್ದೇಶಕರಾದ (ಸಿಬ್ಬಂದಿ ಪರಿಸರ) ಕವಿತಾ ಎಸ್.ಮನ್ನಿಕೇರಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments